ಪುರಿಯಲ್ಲಿ ಇಂದಿನಿಂದ (27) ವೈಭವದ ಜಗನ್ನಾಥ ರಥಯಾತ್ರೆ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಇನ್ನೂ ರಥಯಾತ್ರೆ ಮೆರವಣಿಗೆಯಲ್ಲಿ ಆನೆಯೊಂದು ನಿಯಂತ್ರಣ ತಪ್ಪಿ ಬೀದಿಗಳಲ್ಲಿ ಓಡಾಡಿದೆ.

148ನೇ ಜಗನ್ನಾಥ ರಥಯಾತ್ರೆಯ ಸಂದರ್ಭದಲ್ಲಿ, ಖಾಡಿಯಾ ಪ್ರದೇಶದಲ್ಲಿ ಆನೆಯೊಂದು ನಿಯಂತ್ರಣ ಕಳೆದುಕೊಂಡು ಭಯಭೀತವಾಗಿ, ತನ್ನ ನಿಯಂತ್ರಣ ಕಳೆದುಕೊಂಡಿದೆ.ಇನ್ನೂ ಈ ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ. ಆದರೆ ವೈದ್ಯರು ಮತ್ತು ಅರಣ್ಯ ಇಲಾಖೆಯ ಸಹಾಯದಿಂದ ಶೀಘ್ರದಲ್ಲೇ ನಿಯಂತ್ರಣಕ್ಕೆ ತರಲಾಗಿದ್ದು, ಪೊಲೀಸರು ತಕ್ಷಣ ಕ್ರಮ ಕೈಗೊಂಡು ಪ್ರದೇಶವನ್ನು ತೆರವುಗೊಳಿಸಿದ್ದರಿಂದ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಅಹಮದಾಬಾದ್ ನಗರದ ಪ್ರಸಿದ್ಧ ರಥೋತ್ಸವದಲ್ಲಿ, ಆನೆಗಳು ಯಾವಾಗಲೂ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತವೆ. ಈ ಬಾರಿ ರಥೋತ್ಸವಕ್ಕಾಗಿ ಒಟ್ಟು 16 ಆನೆಗಳು ಆಗಮಿಸಿದ್ದವು. ಅದರಲ್ಲಿ ಒಂದು ಗಂಡು ಆನೆ ಮಾನಸಿಕ ಅಸಮತೋಲನದಿಂದಾಗಿ ಇದ್ದಕ್ಕಿದ್ದಂತೆ ಓಡಲು ಪ್ರಾರಂಭಿಸಿದೆ. ಇದು ಸುತ್ತಮುತ್ತಲಿನ ಜನಸಮೂಹದಲ್ಲಿ ಭಯಭೀತತೆಯನ್ನು ಉಂಟುಮಾಡಿದೆ.

ಘಟನೆ ನಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ, ಜನರನ್ನು ಸುರಕ್ಷಿತ ದೂರಕ್ಕೆ ಕರೆತಂದು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಆನೆಯ ಓಡಾಟದಿಂದ ಉಂಟಾದ ಕಾಲ್ತುಳಿತದಲ್ಲಿ ಸಿಲುಕಿಕೊಳ್ಳದೆ ಕೆಲವರು ಅದೃಷ್ಟವಶಾತ್ ತಪ್ಪಿಸಿಕೊಂಡಿದ್ದಾರೆ.
ಜನದಟ್ಟಣೆ ಇರುವ ಸ್ಥಳಗಳಲ್ಲಿ ಎಲ್ಲರೂ ಜಾಗರೂಕರಾಗಿರಿ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕೆಂದು ಪೊಲೀಸರು ಮತ್ತು ಸಂಘಟಕರು ಮನವಿ ಮಾಡಿದ್ದಾರೆ. ರಥೋತ್ಸವದ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಆನೆಯ ಹಠಾತ್ ಓಟದ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಆ ಆನೆ ಅರಣ್ಯ ಇಲಾಖೆ ಮತ್ತು ವೈದ್ಯರ ಮೇಲ್ವಿಚಾರಣೆಯಲ್ಲಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!