ಪುತ್ತೂರು ನಗರಸಭೆಗೆ ಯಾವುದೋ ದೋಷ ಅಟಕಾಯಿಸಿಕೊಂಡಿದೆ ಇದು ಜನರಾಡುವ ಮಾತು. ಬೆನ್ನು ಬೆನ್ನಿಗೆ ನಾಲ್ಕು ಮಂದಿ ನಗರಸಭಾ ಸದಸ್ಯರ ಸಾವು ಒಂದು ಕಡೆಯಾದರೆ ಇದೀಗ ನಗರಸಭೆಯ ಸದಸ್ಯರೊಬ್ಬರು ಹಠಾತ್ ಆಗಿ ಅಸ್ವಸ್ಥರಾಗಿದ್ದಾರೆ. ಪುತ್ತೂರು ನಗರಸಭೆಗೆ ಏನಾಗಿದೆ ಎಂಬ ಚಿಂತೆಯ ಜತೆಗೆ ಇದೀಗ ಎಲ್ಲರನ್ನೂ ಕಾಡುತ್ತಿರುವ  ಪ್ರಶ್ನೆ ಒಂದೇ ನಗರಸಭೆಗೂ ವಾಸ್ತುದೋಷವೇ..!
ಕಳೆದ ಎರಡು ವರ್ಷದಿಂದ ಈ ಸಮಸ್ಯೆ ನಗರಸಭೆಯನ್ನು ಕಾಡುತ್ತಿದೆ. ನಗರಸಭೆಯ ಸದಸ್ಯರಾಗಿದ್ದ ಶಕ್ತಿಸಿನ್ಹಾ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅದೇ ವಾರ್ಡಿನಲ್ಲಿ ಉಪಚುನಾವಣೆಯಲ್ಲಿ ಗೆದ್ದ ರಮೇಶ್ ರೈ ಆತ್ಮಹತ್ಯೆ ಮಾಡಿಕೊಂಡರು. ಮತ್ತೋರ್ವ ಸದಸ್ಯ ಶೀನಪ್ಪ ನಾಯ್ಕ್ ಅವರು ಅನಾರೋಗ್ಯದಿಂದ ನಿಧನರಾದರೆ ಶಿವರಾಮ್ ಸಫಲ್ಯ ಕೂಡಾ ಅನಾರೋಗ್ಯಕ್ಕೀಡಾಗಿ ಬದುಕು ಕೊನೆಗೊಳಿಸಿದರು. ಇದರಲ್ಲಿ ಮೂವರು ಬಿಜೆಪಿ ಪಕ್ಷದವರು ಓರ್ವ ಕಾಂಗ್ರೆಸ್ ಪಕ್ಷದವರು. ಅದಕ್ಕಾಗಿ ಜನತೆ ಮಾತನಾಡಿಕೊಳ್ಳುತ್ತಿರುವುದು ನಗರಸಭೆಗೆ ವಾಸ್ತುದೋಷ ಅಂಟಿಕೊAಡಿದೆ.
ಸಕ್ರೀಯ ಸದಸ್ಯ ಪಿಜಿ ಅಸ್ವಸ್ಥ
ಶುಕ್ರವಾರ ನಡೆದ ನಗರಸಭೆಯ ಸಾಮಾನ್ಯಸಭೆಯಲ್ಲಿ ಲವಲವಿಕೆಯಿಂದ ಪಾಲ್ಗೊಂಡಿದ್ದ ಪಿ.ಜಿ.ಜಗನ್ನೀವಾಸ ರಾವ್ ಅವರು ಶುಕ್ರವಾರ ರಾತ್ರಿ ಹಠಾತ್ ಆಗಿ ಅಸ್ವಸ್ಥರಾಗಿದ್ದಾರೆ.  ನಗರಸಭೆಯಲ್ಲಿನ ವಾಸ್ತುದೋಷವೇ ನಗರಸಭೆಯ ಸದಸ್ಯರನ್ನು ಕಾಡುತ್ತಿದೆಯಾ ಎಂಬುವುದು ನಿಗೂಢ ಪ್ರಶ್ನೆಯಾಗಿದೆ.
ಈ ಹಿಂದೆ ಒಮ್ಮೆ ನಗರಸಭೆಯ ಕಟ್ಟಡದಲ್ಲಿ ವಾಸ್ತುದೋಷ ಇದೆ ಎಂಬುವುದು ದೊಡ್ಡ ಸುದ್ದಿಯಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಇಲ್ಲಿ ಆಗುತ್ತಿರುವ ಅನಾಹುತಗಳನ್ನು ಗಮನಿಸಿದರೆ ನಿಜಕ್ಕೂ ಇಲ್ಲೊಂದು ಒಂದು `ಸಮಸ್ಯೆ ಖಂಡಿತಾ ಇದೆ’ ಅನ್ನಿಸುತ್ತಿದೆ.
ಉಳಿದಿರುವುದು ೪ ತಿಂಗಳು..
ಪುತ್ತೂರು ನಗರಸಭೆಯ ಈಗಿನ ಸದಸ್ಯರ ಅವಧಿ ಇನ್ನು ಕೇವಲ ೪ ತಿಂಗಳು. ಮುಂದಿನ ನವೆಂಬರ್ ೨ ತನಕ ಈ ಅವಧಿ ಇದೆ. ಹಾಗಾಗಿ ಈಗ ತೆರವಾಗಿರುವ ಹುದ್ದೆಗಳಿಗೆ ಉಪಚುನಾವಣೆ ನಡೆಯುವುದು ಬಹುತೇಕ ಕಷ್ಟಸಾಧ್ಯ. ಅದೇನೇ ಇದ್ದರೂ ಮುಂದೆ ಚುನಾವಣೆ ಬರಲಿದೆ. ಸದಸ್ಯರ ಆಯ್ಕೆಯೂ ನಡೆಯಲಿದೆ. ಆದರೆ ನಗರಸಭೆಗೆ ಅಂಟಿಕೊAಡಿರುವ ಈ ದೋಷಕ್ಕೆ ಏನು ಪರಿಹಾರ..!

Leave a Reply

Your email address will not be published. Required fields are marked *

Join WhatsApp Group
error: Content is protected !!