ಇರಾನ್ -ಇಸ್ರೇಲ್ ನಡುವೆ ಕದನ ವಿರಾಮ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಒಪ್ಪಂದದ ಪರಿಣಾಮ ಚಿನ್ನದ ಬೇಡಿಕೆ ಕಡಿಮೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕೊಂಚ ತಗ್ಗಿದ್ದು, ದೇಶಿಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ದೆಹಲಿಯ ಚಿನಿವಾರಪೇಟೆಯಲ್ಲಿ ಶುಕ್ರವಾರ ಶುದ್ಧ ಚಿನ್ನದ ದರ 10 ಗ್ರಾಂಗೆ 930 ಇಳಿಕೆಯಾಗಿ 97,670 ರೂ.ಗೆ ತಲುಪಿದೆ. ಆಭರಣ ಚಿನ್ನದ ದರ 10 ಗ್ರಾಂಗೆ 850 ರೂ. ಇಳಿಕೆಯಾಗಿದ್ದು, 97,200 ರೂ.ಗೆ ಮಾರಾಟವಾಗಿದೆ.

ಒಂದು ಕೆಜಿ ಬೆಳ್ಳಿ ದರ 100 ರೂಪಾಯಿ ಕಡಿಮೆಯಾಗಿದ್ದು, 1,03,000 ರೂ.ಗೆ ಮಾರಾಟವಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ದರ 930 ರೂಪಾಯಿ ಕಡಿಮೆಯಾಗಿದ್ದು, 98,020 ರೂ.ಗೆ ಮಾರಾಟವಾಗಿದೆ. 10 ಗ್ರಾಂ ತೂಕದ 22 ಕ್ಯಾರೆಟ್ ತೂಕದ 850 ರೂ. ಕಡಿಮೆಯಾಗಿದ್ದು, 89,850 ರೂ.ಗೆ ಮಾರಾಟವಾಗಿದೆ. ಕೆಜಿ ಬೆಳ್ಳಿ ದರ 100 ರೂ. ಕಡಿಮೆಯಾಗಿದ್ದು, 1,07,900 ರೂ. ಆಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!