
ಪುತ್ತೂರು: ಬೈಪಾಸ್ ರಸ್ತೆಯ ಉರ್ಲಾಂಡಿ ಸಮೀಪ ರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತವಾಗಿ ಮಗು ಸಹಿತ ಏಳುಮಂದಿಗೆ ಗಾಯಗೊಂಡ ಘಟನೆ ಜೂನ್ 29 ರ ಭಾನುವಾರ ನಡೆದಿದೆ.
ಸಾಲೆತ್ತೂರು ಮೂಲದ ಮೊಮ್ಮದ್ ತಮೀಮ್ (೫), ಹಮೀದ್ (೪೦), ಇಸ್ಮಾಯಿಲ್ (೪೫), ಇಬ್ರಾಹಿಂ (೬೫), ಸಮೀರ್ (೩೪), ಸುಲೈಮಾನ್ (೨೬)ಎಂಬವರು ರಿಕ್ಷಾದಲ್ಲಿ ಉರೂಸ್ ಕಾರ್ಯಕ್ರಮದಿಂದ ಮರಳುತ್ತಿದ್ದರು. ಹಾಗೂ ಬೈಕ್ ಸವಾರ ಕೀರ್ತನ್ ಗಾಯಗೊಂದಿದ್ದಾರೆ.
ನಗರದಿಂದ ದರ್ಬೆ ಕಡೆಗೆ ಬೈಕ್ ತೆರಳುತ್ತಿದ್ದ ಸಂದರ್ಭ ಒಳರಸ್ತೆಯಿಂದ ಕಾರು ಏಕಾಏಕಿ ಮುಖ್ಯ ರಸ್ತೆಗೆ ಬಂದಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಬಲ ಬದಿಗೆ ಬೈಕ್ ಚಲಾಯಿಸಿದ್ದಾರೆ. ಮುಂಭಾಗದಿಂದ ಬಂದ ರಿಕ್ಷಾಕ್ಕೆ ಗುದ್ದಿದ್ದು, ರಿಕ್ಷಾ ಚಾಲಕ ತಕ್ಷಣ ಬ್ರೇಕ್ ಹಾಕಿದ ಕಾರಣ ತಲೆಕೆಳಗಾಗಿ ಬಿದ್ದಿದೆ. ಗಾಯಗಳುಗಳನ್ನು ಸಮೀಪದ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ತೂರು ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ.






