ಕುಣಿಗಲ್ ಪಟ್ಟಣ ಸಮೀಪದ ಬಿದನಗೆರೆ ಹತ್ತಿರದ ರಾಷ್ಟ್ರೀಯ ಹೆದ್ದಾರಿ 75ರ ತಿರುವಿನಲ್ಲಿ ಭಾನುವಾರ ರಾತ್ರಿ ಕಾರಿಗೆ ಕ್ಯಾಂಟರ್ ವಾಹನ ಡಿಕ್ಕಿಯಾಗಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

ರಾಮನಗರ ಜಿಲ್ಲೆ ಮಾಗಡಿ‌ ಪಟ್ಟಣದ ನಟರಾಜ ಬಡಾವಣೆ ನಿವಾಸಿ ಭಾರತ್ ಕೋಪರೇಟಿವ್ ಬ್ಯಾಂಕ್ ನಿರ್ದೇಶಕ ಸೀಬೆಗೌಡ (45) ಪತ್ನಿ ಶೋಭಾ (36) ಮಕ್ಕಳಾದ ದುಂಬಿಶ್ರೀ, ಭಾನುಕಿರಣ್ ಗೌಡ ಮೃತ ದುರ್ದೈವಿಗಳು.

ಸೀಬೇಗೌಡ, ಪತ್ನಿ, ಮಗ ಹಾಗೂ ಮಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕುಣಿಗಲ್ ಬೈಪಾಸ್ ನಲ್ಲಿರುವ ಉಗಿಬಂಡಿ ರೆಸ್ಟೋರೆಂಟ್ ಬಳಿ ಘಟನೆ ನಡೆದಿದೆ. ಕುಣಿಗಲ್ ಬಳಿ ಹಾದುಹೋಗಿರುವ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಬರುವ ಕುಣಿಗಲ್ ಬೈಪಾಸ್ ಬಳಿ ಕಾರು ಯೂಟರ್ನ್ ತೆಗೆದುಕೊಳ್ಳುತ್ತಿರುವಾಗ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕ್ಯಾಂಟರ್, ಕಾರಿಗೆ ಡಿಕ್ಕಿಯಾಗಿದೆ.

ಕಾರು ಸಂಪೂರ್ಣ ನಜ್ಜುಗುಜ್ಜು

ಅತೀ ವೇಗದಲ್ಲಿ ಕ್ಯಾಂಟರ್ ಡಿಕ್ಕಿಯಾದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಹಲವು ಪಲ್ಟಿಯಾದ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಾಗಡಿ ತಾಲೂಕಿನ ಯಲಗಲವಾಡಿ ಗ್ರಾಮದ ಕುಟುಂಬ

ಮೃತರೆಲ್ಲರು ಮಾಗಡಿ ತಾಲೂಕಿನ ಯಲಗಲವಾಡಿ ಹ್ಯಾಂಡ್ ಪೊಸ್ಟ್ ನವರು ಎನ್ನಲಾಗಿದೆ. ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ, ಪರಿಶೀಲನ ನಡೆಸಿದ್ದಾರೆ. ಮೃತದೇಹಗಳನ್ನು ಕುಣಿಗಲ್ ತಾಲ್ಲೂಕು ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!