
ಪ್ರ ತಿಯೊಬ್ಬ ಯುವತಿಯು ತನ್ನ ಪ್ರಿಯಕರ ವಿಶೇಷವಾಗಿ ಪ್ರಪೋಸ್ ಮಾಡಬೇಕು ಎಂದು ಆಸೆ ಪಡುತ್ತಾಳೆ. ಅದರಂತೆ ಇಲ್ಲೊಬ್ಬ ಯುವಕ ತನ್ನ ಪ್ರೇಯಸಿಗೆ ಸಿನಿಮೀಯ ಶೈಲಿಯಲ್ಲಿ ಪ್ರಪೋಸ್ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾನೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅದ ವಿಡಿಯೋದಲ್ಲಿ ಯುವಕನೋರ್ವ ಜಲಪಾತದ ಅಂಚಿನಲ್ಲಿ ನಿಂತು ತನ್ನ ಪ್ರೇಯಸಿಗೆ ವಿಶೇಷ ರೀತಿಯಲ್ಲಿ ಪ್ರಪೋಸ್ ಮಾಡಲು ಪ್ಲಾನ್ ಮಾಡಿದ್ದಾನೆ.
ಅದರಂತೆ ಮೊದಲು ಆಕೆಯನ್ನು ಮುಂದಕ್ಕೆ ಕಳುಹಿಸಿದ್ದಾನೆ.
ಯುವತಿಯು ಅದರಂತೆ ಜಲಪಾತದ ಅಂಚಿನಲ್ಲಿ ನಿಂತು ಸುತ್ತಲೂ ನೋಡುತ್ತಿರುವಾಗ ವ್ಯಕ್ತಿಯು ಆಕೆಯನ್ನು ಕರೆದು ಜೇಬಿನಿಂದ ಉಂಗುರವನ್ನು ತೆಗೆದು ಬಂಡೆಯ ಮೇಲೆಯೇ ಮೊಣಕಾಲು ಊರಿ ಪ್ರಪೋಸ್ ಮಾಡಲು ಮುಂದಾದಾಗ ಏಕಾಏಕಿ ಬಂಡೆ ಜಾರಿದೆ.
ಯುವಕ ಇನ್ನೇನು ಮೊಣಕಾಲು ಊರಬೇಕು ಅನ್ನುವಷ್ಟರಲ್ಲಿ ಒಂದು ಕಾಲು ಜಾರಿದ್ದು, ಪರಿಣಾಮ ನೀರಿನಲ್ಲಿ ಜಾರಿಕೊಂಡು ಹೋಗಿ ದೊಡ್ಡ ಹೊಂಡಕ್ಕೆ ಬಿದ್ದಿದ್ದಾನೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ
ಸದ್ಯ ಯುವಕನ ಈ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯುವಕ ಬದುಕಿದ್ದಾನೋ ಸತ್ತಿದ್ದಾನೋ ಎಂಬುವುದು ಕೂಡ ತಿಳಿದು ಬಂದಿಲ್ಲ.






