ಪುತ್ತೂರು; ಇದು ಪುತ್ತೂರಿನ ಜನನಿಬಿಡ ಕೋರ್ಟು ರಸ್ತೆಯ ಕಥೆ. ಮುಖ್ಯ ರಸ್ತೆಯಿಂದ ಕಿಲ್ಲೆ ಮೈದಾನಕ್ಕೆ ಹೋಗುವ ಈ ರಸ್ತೆಯಲ್ಲಿ ಸದಾ ಜನಜಂಗುಳಿ…ಏಕುಮುಖ ರಸ್ತೆಯಾಗಿದ್ದರೂ ಈ ರೋಡ್ ಮಾತ್ರ ಯಾವಾಗಲೂ ಬ್ಲಾಕ್. ಬ್ಲಾಕ್..ಬ್ಲಾಕ್..! ಈ ಕೋರ್ಟ್ ರಸ್ತೆ ಸದಾ ಬ್ಲಾಕ್ ಆಗಲು ಕಾರಣ ಇಲ್ಲಿ ರಸ್ತೆ ಬದಿಯಲ್ಲಿಯೇ ನಿಲ್ಲಿಸಲಾಗುವ ದ್ವಿಚಕ್ರ ವಾಹನಗಳು. ಇಲ್ಲಿ ಕಾನೂನು ನಿಯಮವೂ ಯಾವುದೂ ಇಲ್ಲ. ಯಾರೇ ಬಂದರೂ ಇನ್ನೊಬ್ಬರಿಗೆ ತೊಂದರೆಯಾಗಬಹುದು ಎಂದು ಯೋಚಿಸದೆ ವಾಹನಗಳನ್ನು ರಸ್ತೆ ಬದಿಯಲ್ಲಿಯೇ ಪಾರ್ಕ್ ಮಾಡಿ ತಮ್ಮಷ್ಟಕ್ಕೇ ತಾವು ಹೋಗಿಬಿಡಬಹುದು. ಹಾಗಂತ ಇದು ಅಧಿಕೃತ ಪಾರ್ಕಿಂಗ್ ಸ್ಥಳ ಅಲ್ಲ.

ಪುತ್ತೂರಿನ ವಿವಿಧ ಕಡೆಗಳಲ್ಲಿ ಪಾರ್ಕಿಂಗ್ ಸೌಲಭ್ಯ ಮಾಡಲಾಗಿದೆ. ಎಲ್ಲಿಯಾದರೂ ತಪ್ಪಿ ನೀವೇನಾದರೂ ಪಾರ್ಕಿಂಗ್ ಇಲ್ಲದ ಕಡೆಯಲ್ಲಿ ವಾಹನ ನಿಲ್ಲಿನಿಲ್ಲಿಸಿದರೆ ಸಂಚಾರಿ ಪೊಲೀಸರು ಹಾಜರಾಗಿ ನಿಮಗೊಂದು ಕೇಸು ಜಡಿಯುತ್ತಾರೆ. ಆದರೆ ಕೋರ್ಟ್ ರಸ್ತೆಯಲ್ಲಿ ಮಾತ್ರ ನಿಮಗೆ ಅಂತಹ ಭಯ ಬೇಡ. ಯಾಕೆಂದರೆ ಇಲ್ಲಿಗೆ ಸಂಚಾರಿ ಪೊಲೀಸರು ಬರುವುದೇ ಇಲ್ಲ. ಬಂದರೂ ಅವರಿಗೆ ಈ ರಸ್ತೆಯ ಬದಿಯಲ್ಲಿಯೇ ಪಾರ್ಕ್ ಮಾಡಿ ಹೋಗಿರುವ ದ್ವಿಚಕ್ರ ವಾಹನಗಳು ಕಾಣುವುದಿಲ್ಲ. ಇದು ಹೀಗೆ ಮುಂದುವರಿದರೆ ಕೆಲ ದಿನಗಳಲ್ಲಿಯೇ ಈ ರಸ್ತೆ ನೋ ಮ್ಯಾನ್ ಲ್ಯಾಂಡ್ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ.
ಕೋರ್ಟ್ ರಸ್ತೆಯ ಉದ್ದಕ್ಕೂ ಇದೇ ಪರಿಸ್ಥಿತಿ. ಕಿಲ್ಲೆ ಮೈದಾನದ ಭಾಗದಿಂದ ಮಾತ್ರ ಹೋಗಲು ಅವಕಾಶ ಇರುವ ಈ ರಸ್ತೆ ಮುಖ್ಯ ರಸ್ತೆಯನ್ನು ಸಂಪರ್ಕಿಸುತ್ತದೆ. ಆದರೆ ಮುಖ್ಯರಸ್ತೆಯಿಂದ ಈ ರಸ್ತೆಗೆ ವಾಹನಗಳು ಬರುವ ಅವಕಾಶ ಇಲ್ಲ. ಬಹುಷ; ಇಲ್ಲಿ ರಸ್ತೆಯ ಬದಿಯಲ್ಲಿ ಅಲ್ಲ ಮಧ್ಯೆ ವಾಹನ ಪಾರ್ಕ್ ಮಾಡಿ ಹೋದರೂ ಯಾರೂ ಕೇಳುವುದಿಲ್ಲ ಎಂಬAತಹ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯಲ್ಲಿ ಹೇಗೆ ಬೇಕಾದರೂ ವಾಹನ ನಿಲ್ಲಿಸಲಿ ನೀವು ಬರೋದು ಬೇಡ ಅಂತಾ ಯಾರೋ ಪೊಲೀಸರಿಗೆ — ಕೊಟ್ಟಿರಬಹುದೇ.. ! ಎಂಬ ಅನುಮಾನ ಈ ರಸ್ತೆಯಲ್ಲಿ ಬರುವ ವಾಹನ ಚಾಲಕರಿಗೆ ಬರುವುದು ಖಂಡಿತಾ.. ಪೊಲೀಸರೇ ಒಂದು ಸಲ ನೀವು ಈ ರಸ್ತೆಗೆ ಬಂದು ನೋಡಿ..

Leave a Reply

Your email address will not be published. Required fields are marked *

Join WhatsApp Group
error: Content is protected !!