ಪುತ್ತೂರು: ಮಕ್ಕಳ ತಜ್ಞ ಡಾ.ಶ್ರೀಕಾಂತ್ ರಾವ್ ಅವರ ನೂತನ ಕ್ಲಿನಿಕ್ ಚೈಲ್ಡ್ ಕೇರ್ ಪಾಲಿಕ್ಲಿನಿಕ್ ಪುತ್ತೂರು ಮುಖ್ಯರಸ್ತೆ ಜಿ.ಎಲ್ ವನ್ ಮಾಲ್ ಎದುರಿನ ಸಿಟಿ ಸೆಂಟರ್‌ನ ಪ್ರಥಮ ಮಹಡಿಯಲ್ಲಿ ಜು.11ರಂದು ಶುಭಾರಂಭಗೊಂಡಿತು.

ನೂತನ ಕ್ಲಿನಿಕ್ ಅನ್ನು ಉದ್ಘಾಟಿಸಿ ಮಾತನಾಡಿದ ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಸಹಕಾರರತ್ನ ಕೆ ಸೀತಾರಾಮ ರೈ ಅವರು ಕಳೆದ 35 ವರ್ಷಗಳಿಂದ ನನಗೂ ಡಾ. ಶ್ರೀಕಾಂತ್‌ರಿಗೂ ಅವಿನಾಭಾವ ಸಂಬಂಧ. ಅವರು ಪುತ್ತೂರಿಗೆ ತುಂಬಾ ಸೇವೆ ನೀಡಿದ್ದಾರೆ. ಬೆಳೆಯುತ್ತಿರುವ ಪುತ್ತೂರಿಗೆ ಇತಂಹ ಕ್ಲಿನಿಕ್ ಅವಶ್ಯಕತೆ ಇದೆ. ಡಾ. ಶ್ರೀಕಾಂತ್ ಅವರ ಸೇವೆ ಜನಸಾಮಾನ್ಯರಿಗೆ ಸಿಗುವಂತಾಗಲಿ ಎಂದರು.

ಸುದಾನ ವಸತಿಯುತ ಶಾಲೆಯ ಸಂಚಾಲಕ ರೇ.ವಿಜಯ ಹಾರ್ವಿನ್ ಅವರು ಮಾತನಾಡಿ ಡಾ. ಶ್ರೀಕಾಂತ್ ಅವರು ಹೃದಯ ಶ್ರೀಮಂತಿಗೆ ಇರುವ ಮನುಷ್ಯ. ಅವರು ಮಕ್ಕಳನ್ನು ಪ್ರೀತಿ ಮಾಡುವ ವೈದ್ಯರು. ಡಾ. ಶಿವಾನಂದ ಅವರ ಸ್ಥಳದಲ್ಲಿ ಕ್ಲಿನಿಕ್ ಆರಂಭಿಸಿದ ಅವರು ಜನಪರವಾಗಿ ಜನರಿಗೆ ಆರೋಗ್ಯ ಕೊಡುವ ಸೇವೆ ಮಾಡಿದ್ದಾರೆ ಎಂದು ಶುಭ ಹಾರೈಸಿದರು

ಸ್ವಣೋದ್ಯಮಿ ಬಲರಾಮ ಆಚಾರ್ಯ ಅವರು ಮಾತನಾಡಿ ಡಾ. ಶ್ರೀಕಾಂತ್ ಅವರ ನೂತನ ಕ್ಲಿನಿಕ್‌ನಲ್ಲಿ ಬಂದಾಗ ಮಕ್ಕಳ ಮನಸ್ಸನ್ನು ಸೆಳೆಯಲು ಬೇರೆ ಬೇರೆ ಪೋಸ್ಟ‌ರ್ ಅನ್ನು ಗೋಡೆಯಲ್ಲಿ ಹಾಕಲಾಗಿದೆ. ಇದು ಮಕ್ಕಳ ಗಮನವನ್ನು ಬೇರೆಡೆಗೆ ಕೊಂಡೊಯ್ಯುವ ಮೂಲಕ ಇದು ಕೂಡಾ ಮಕ್ಕಳ ವೈದ್ಯಕೀಯ ವಿಭಾಗದ ಚಿಕಿತ್ಸೆಯೇ ಆಗಿದೆ. ನನ್ನ ಎಲ್ಲಾ ಮಕ್ಕಳಿಗೂ ಚಿಕಿತ್ಸೆ ಕೊಡಿಸಿದ್ದು ಡಾ. ಶ್ರೀಕಾಂತ್ ರಾವ್. ಅವರ ಮಾತಿನ ಸಲಹೆಯಿಂದ ಪೋಷಕರಿಗೆ ಭರವಸೆ ಮತ್ತು ಮಕ್ಕಳ ರೋಗ ಗುಣಮುಖ ಆಗುತ್ತದೆ ಎಂದರು.

ಉದ್ಯಮಿ ಎಮ್.ಜಿ ರಫೀಕ್ ಅವರು ಮಾತನಾಡಿ ನನ್ನ ಎಲ್ಲಾ ಮಕ್ಕಳಿಗೂ ಡಾ. ಶ್ರೀಕಾಂತ್ ಅವರೇ ವೈದ್ಯರು. ಮಕ್ಕಳಿಗೆ ಏನು ತಿನ್ನಬೇಕು, ತಿನ್ನಬಾರದು ಎಂದು ಹೇಳುವ ಅವರ ಸೇವೆಯ ಸ್ಟೈಲೇ ಬೇರೆ. ಒತ್ತಡದ ನಡುವೆಯೂ ರಾತ್ರಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳಿಗೂ ಉಚಿತ ವೈದ್ಯಕೀಯ ಸೇವೆ ನೀಡುತ್ತಾರೆ. ಅಲ್ಲಿಯೂ ಅವರು ಸಮಾಜ ಸೇವೆ ನೀಡಿದ್ದಾರೆ ಎಂದರು.

ಡಾ.ಐ ಶ್ರೀಕಾಂತ್ ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ 1986ರ ಎಪ್ರಿಲ್ 13ಕ್ಕೆ ಪುತ್ತೂರಿನಲ್ಲಿ ಕ್ಲಿನಿಕ್ ಆರಂಭಿಸಿದ್ದೆವು.

ನಾನು ಮೈಸೂರಿನಲ್ಲಿ ಮೆಡಿಕಲ್ ಮತ್ತು 3 ವರ್ಷ ಮುಂಬಯಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಉತ್ತಮ ಅವಕಾಶ ನನಗೆ ಒಳ್ಳೆಯ ಅನುಭವ ನೀಡಿದೆ. ಆದ್ದರಿಂದ ಪುತ್ತೂರಿನಲ್ಲಿ ಉತ್ತಮ ಸೇವೆ ನೀಡಲು ಸಾಧ್ಯವಾಯಿತು. ಸುಮಾರು 15 ವರ್ಷ ನಾವು ಸುಳ್ಯ ಸಹಿತ ಹಲವು ಕಡೆ ಹೋಗಿ ಚಿಕಿತ್ಸೆ ನೀಡುತ್ತಿದ್ದೆ. ಬಳಿಕ ಚೇತನ ಆಸ್ಪತ್ರೆ ಆರಂಭಿಸಿ, ಕಡಿಮೆ ದರದಲ್ಲಿ ಆದಷ್ಟು ಚಿಕಿತ್ಸೆ ನೀಡುವ ಮೂಲಕ ಸೇವೆ ನೀಡಲು ಆರಂಭಿಸಿದ್ದೇವು. ಆರಂಭದ 10 ವರ್ಷ ಪುತ್ತೂರಿನ ಹಿರಿಯ ವೈದ್ಯರಾದ ಡಾ. ಗೌರಿ ಪೈ ಮತ್ತು ಡಾ. ಪ್ರಸಾದ್ ಭಂಡಾರಿ ಅವರು ಪ್ರೋತ್ಸಾಹ ನೀಡಿದ್ದಾರೆ ಎಂದರು.

ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ. ಶ್ರೀಕಾಂತ್ ರಾವ್ ಅವರ ಪತ್ನಿ ಡಾ. ನಂದಿತಾ, ಪುತ್ರ ನವನೀತ್ ರಾವ್, ಡಾ. ಶ್ರೀಕಾಂತ್ ರಾವ್ ಅವರ ತಾಯಿ ನಳಿನಿ ಪಿ ದಾರೇಶ್ವ‌ರ್, ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಡಾ. ನರಸಿಂಹ ಶರ್ಮ, ಅಂಬಿಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ನಟ್ಟೋಜ ಸುಬ್ರಹ್ಮಣ್ಯ, ಪುತ್ತೂರು ಪ್ರಗತಿ ಸ್ಪೆಷಾಲಟಿ ಅಸ್ಪತ್ರೆಯ ಅಧ್ಯಕ್ಷ ಡಾ. ಶ್ರೀಪತಿ ರಾವ್‌, ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಭಾಸ್ಕರ್ ಎಸ್, ಡಾ.ಸುಲೇಖಾ ವರದರಾಜ್, ಬಿಜೆಪಿ ನಗರಮಂಡದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಕಟ್ಟಡದ ಮಾಲಕ ಹಮೀದ್, ಮಾಜಿ ಪುರಸಭೆ ನಿವೃತ್ತ ಆರೋಗ್ಯಾಧಿಕಾರಿ ಅಬೂಬಕ್ಕರ್, ಸುಬ್ರಹ್ಮಣ್ಯ ಭಟ್, ಎಮ್ ಜೆ ರೈ, ಎ ಜಗಜೀವನ್‌ದಾಸ್ ರೈ,

ಜೈರಾಜ್ ಭಂಡಾರಿ, ನಿವೃತ್ತ ಪ್ರಾಂಶಪಾಲ ಝೇವಿಯರ್ ಡಿಸೋಜ, ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಆಸ್ಕ‌ರ್ ಆನಂದ್, ಪರಮೇಶ್ವರ ಗೌಡ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ ಜಾಲಾಡಿ, ರಫೀಕ್ ದರ್ಬೆ, ಅಬಕಾರಿ ಇಲಾಖೆಯ ಪ್ರೇಮಾನಂದ, ಪುತ್ತೂರು ಕೊಂಬೆಟ್ಟು ಶ್ರೀ ರಾಮಕೃಷ್ಣ ಐಟಿಐ ಸಂಚಾಲಕ ಯು.ಪಿ.ರಾಮಕೃಷ್ಣ, ಉದಯ ಹೆಚ್, ಸುಧೀರ್ ನೋಂಡಾ, ಪ್ರೀತಾ ಹೆಗ್ಡೆ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಶ್ರೀಧ‌ರ್ ಮಂಜಲ್ಪಡು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಕ್ಲಿನಿಕ್‌ನಲ್ಲಿ ಸಂದರ್ಶನಕ್ಕೆ ಲಭ್ಯ ಸಮಯ

ಡಾ. ಶ್ರೀಕಾಂತ್ ರಾವ್ ಅವರು ಪ್ರತಿ ದಿನ ಬೆಳಗ್ಗೆ ಗಂಟೆ 9ರಿಂದ ಮಧ್ಯಾಹ್ನ 2.30 ಮತ್ತು ಸಂಜೆ ಗಂಟೆ 4.30ರಿಂದ ರಾತ್ರಿ 9.30ರ ತನಕ ಕ್ಲಿನಿಕ್‌ನಲ್ಲಿ ಸಂದರ್ಶನಕ್ಕೆ ಲಭ್ಯರಿರುತ್ತಾರೆ. ಮುಂಚಿತ ನೋಂದಾವಣೆ ಸಮಯ ಬೆಳಿಗ್ಗೆ ಗಂಟೆ 6ರಿಂದ 11ರ ತನಕ ಹೆಚ್ಚಿನ ಮಾಹಿತಿಗಾಗಿ 8088824648 2 8197529363 ಅನ್ನು ಸಂಪರ್ಕಿಸುವಂತೆ ಡಾ.ಶ್ರೀಕಾಂತ್ ರಾವ್ ತಿಳಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!