ಪುತ್ತೂರು: ರಾಜ್ಯ ಸರಕಾರ ಗ್ಯಾರೆಂಟಿ ಯೋಜನೆಗಳಿಗೆ ಸೋರಿಕೆಯ 40 ಶೇಕಡಾ ಹಣವನ್ನು ಬಳಸುತ್ತೇವೆ ಎಂದಿತ್ತು, ಆದರೆ ಇಂದು ಸರಕಾರದ ಬಳಿ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲದೆ ಬೆಲೆ ಏರಿಕೆಯಿಂಸ ಜನ ತತ್ತರಿಸಿ ಹೋಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ‌ ಪ್ರತಾಪ್‌ಸಿಂಹ ನಾಯಕ್‌ ಹೇಳಿದ್ದಾರೆ.

ನಗರದ ಅಮ‌ರ್ ಜವಾನ್ ಸ್ಥಾರಕದ ಸಮೀಪ ಭಾರತೀಯ ಜನತಾ ಪಾರ್ಟಿಯ ನಗರ ಹಾಗೂ ಗ್ರಾಮಾಂತರ ಮಂಡಲದ ವತಿಯಿಂದ ಕೆಂಪು ಕಲ್ಲು, ಮರಳು ಸಮಸ್ಯೆಯ ಬಗ್ಗೆ ರಾಜ್ಯ ಸರಕಾರದ ವೈಫಲ್ಯ ಖಂಡಿಸಿ ಜನಾಕ್ರೋಶ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು

ರಾಜ್ಯದಲ್ಲಿ ಕೆಂಪುಕಲ್ಲು ಮತ್ರು ಮರಳು ಅಭಾವದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ ನಾಯಕ್, ಉಳಿಸಿದ 40% ಶೇಕಡಾ ಹಣವನ್ನೂ ಬಳಸುತ್ತಿಲ್ಲ, ನಾವು ಚುನಾವಣೆಯ ಸಂದರ್ಭದಲ್ಲಿ ಒಂದು ಮಾತು ಹೇಳಿದ್ದೆವು. ಕಾಂಗ್ರೇಸ್ ಗೆ ಕರ್ನಾಟಕ ರಾಜ್ಯವೊಂದೇ ದೊಡ್ಡ ಅಧಿಕಾರವಿರುವ ರಾಜ್ಯ, ಇಲ್ಲಿನ ಹಣವನ್ನೇ ಕಾಂಗ್ರೆಸ್ ಇಡೀ ದೇಶದಲ್ಲಿ ಬಳಸುತ್ತಿದೆ.

ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲ ಪ್ರತಿ ಬಾರಿಯೂ ರಾಜ್ಯಕ್ಕೆ ಬರುತ್ತಾರೆ. ರಾಜ್ಯಕ್ಕೆ ಬಂದು ಬ್ಯಾಗ್ ನಲ್ಲಿ ಹಣ ತುಂಬಿ ಹೋಗುತ್ತಾರೆ. ಯಾರು ಹೆಚ್ಚು ದುಡ್ಡು ಕೊಡುತ್ತಾರೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುತ್ತೆ. ಮುಖ್ಯಮಂತ್ರಿಗಳಿಗೆ ಅವರ ಕುರ್ಚಿ ಉಳಿಸಿಕೊಳ್ಳುವ ಅನಿವಾರ್ಯತೆ, ಈ ಕಾರಣಕ್ಕೆ ರಾಜ್ಯದ ಜನರ ಸಮಸ್ಯೆಯನ್ನು ಮುಖ್ಯಮಂತ್ರಿಗಳಿಗೆ ಅನಿವಾರ್ಯತೆಯಲ್ಲ ಎಂದು ವಿಧಾನ ಪರಿಷತ್ ಸದಸ್ಯ‌ ಪ್ರತಾಪ್‌ಸಿಂಹ ನಾಯಕ್‌ ಹೇಳಿದ್ದಾರೆ.

ಮೆರವಣಿಗೆ, ಮನವಿ ಸಲ್ಲಿಕೆ

ಆರಂಭದಲ್ಲಿ ನೆಲ್ಲಿಕಟ್ಟೆಯ ಖಾಸಗಿ ಬಸ್ ನಿಲ್ದಾಣದ ಬಳಿಯಿಂದ ಕಿಲ್ಲೆ ಮೈದಾನದವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಮಂದಿ ಕಾರ್ಮಿಕರು, ಕಾರ್ಯಕರ್ತರು ಮು ಖಂಡರು ಭಾಗವಹಿಸಿದರು. ಪ್ರತಿಭಟನೆ ಸಭೆಯ ಬಳಿಕ ತಹಶೀಲ್ದಾರ್ ಮೂಲಕ ಮುಖ್ಯ ಮಂತ್ರಿಗಳಿಗೆ ಸಮಸ್ಯೆಗಳನ್ನು ಬಗೆಹರಿಸಲು ಮನವಿ ಸಲ್ಲಿಸಲಾಯಿತು

ಹಿರಿಯ ವರ್ಶಕ ವಾಮನ್ ಪ್ರೈ ಭಾರತ್ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಲೋಕೇಶ್ ಹೆಗ್ಡೆ, ಕಾರ್ಮಿಕ ಸಂಘಟನೆಯ ಪುರಂದರ ಶೆಟ್ಟಿ ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಅಭಿಪ್ರಾಯ ಹಂಚಿಕೊಂಡರು. ನಗರ ಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಸ್ವಾಗತಿಸಿ, ಉಮೇಶ್ ಕೊಡಿಬೈಲು ವಂದಿಸಿದರು. ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ಕಾರ್ಯಕ್ರಮ ನಿರ್ವಹಿಸಿದರು

Leave a Reply

Your email address will not be published. Required fields are marked *

Join WhatsApp Group
error: Content is protected !!