ಉಪ್ಪಿನಂಗಡಿ: ನಿಲ್ಲಿಸಿದ್ದ ಅಟೋ ರಿಕ್ಷಾವನ್ನು ಕಳವು ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಪೆರ್ನೆಯ ಬಳಿ ನಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.

ಪೆರ್ನೆ ನಿವಾಸಿ ಅಶ್ರಫ್ ಪಿ. ಎಂಬವರು ದೂರು ನೀಡಿದ್ದು, ತನ್ನ ಸಹೋದರಿಯ ಪುತ್ರ ತೌಫೀಕ್ ಎಂಬಾತನ ಮಾಲಕತ್ವದ ಕೆಎ 21 ಸಿ6416 ನೋಂದಣಿ ಸಂಖ್ಯೆಯ ಆಟೋ ರಿಕ್ಷಾದ ಸಾಲದ ಕಂತನ್ನು ತೌಫೀಕ್‌ನ ಒಪ್ಪಿಗೆಯಂತೆ ಬ್ಯಾಂಕಿಗೆ ಮರು ಪಾವತಿ ಮಾಡಿ ಸುಮಾರು 20 ದಿನಗಳಿಂದ ಈ ಆಟೋ ರಿಕ್ಷಾದಲ್ಲಿ ತಾನು ಬಾಡಿಗೆ ಮಾಡಿಕೊಂಡಿದ್ದೆ. ಜು. 13 ರಂದು ಆಟೋ ರಿಕ್ಷಾದಲ್ಲಿ ಬಾಡಿಗೆ ಮಾಡಿ ರಾತ್ರಿ 11.30ಕ್ಕೆ ಸುಲೈಮಾನ್ ಎಂಬವರ ಮನೆಯ ಎದುರುಗಡೆ ಪೆರ್ನೆ ಎ.ಎಂ. ಅಡಿಟೋರಿಯಂ ಬಳಿ ರಿಕ್ಷಾವನ್ನು ಲಾಕ್ ಮಾಡಿ ನಿಲ್ಲಿಸಿದ್ದೆ. ಜು. 14 ರಂದು ಮುಂಜಾನೆ 4 ಗಂಟೆಗೆ ತಾನು ಮಸೀದಿಗೆ ಹೋಗಲು ಆಟೋ ರಿಕ್ಷಾದ ಬಳಿಗೆ ತೆರಳಿ ನೋಡಿದಾಗ ಆಟೋ ರಿಕ್ಷಾ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೆ ಕಾಣೆಯಾಗಿರುತ್ತದೆ. ಈ ಆಟೋ ರಿಕ್ಷಾವನ್ನು ಜು. 13 ರ ರಾತ್ರಿ 11.30ರಿಂದ ಮರುದಿನ ಮುಂಜಾನೆ 4 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಅಶ್ರಫ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!