ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಕಳ್ಳತನ, ರಾಬರಿ, ದರೋಡೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಖದೀಮರಿಗೆ ಪೊಲೀಸರ ಬಗ್ಗೆ ಕಿಂಚಿತ್ತೂ ಭಯ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇದೀಗ ಅಂಥದ್ದೇ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸುವಂತಹ ರಾಬರಿ ನಡೆದಿದೆ.

ಎಸ್, ಇದು ಬೆಂಗಳೂರಿಗರು ತಪ್ಪದೇ ನೋಡಲೇಬೇಕಾದ ಸ್ಟೋರಿ. ಖದೀಮರು ಹೇಗೆಲ್ಲಾ ಕೃತ್ಯ ಎಸಗುತ್ತಾರೆ ಎಂಬವುದು ನೀವು ತಿಳಿದಿರಲೇಬೇಕು. ಈಗ ನಾವು ಹೇಳುತ್ತಿರುವ ರಾಬರಿ ಕಥೆ ಕೇಳಿದ್ರೆ ನೀವೇ ಬೆಚ್ಚಿಬೀಳ್ತೀರಾ. ಹೌದು, ಜ್ಯುವಲ್ಲರಿ ಶಾಪ್ ಕ್ಲೋಸ್ ಮಾಡೋ ಟೈಮ್ ನಲ್ಲಿ ಕೈನಲ್ಲಿ ಗನ್ ಹಿಡಿದು ಎಂಟ್ರಿಕೊಟ್ಟ ಮುಸುಕುಧಾರಿಗಳು ಕೈಗೆ ಸಿಕ್ಕ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರು ಹೊರವಲಯದಲ್ಲಿ ಜರುಗಿದೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಗಡಿರಸ್ತೆಯ ಮಾಚೋಹಳ್ಳಿ ಗೇಟ್ ನ ರಾಮ್ ಜ್ಯುವೆಲ್ಲರಿ ಶಾಪ್ ನಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ. ಖದೀಮರ ಈ ಕೃತ್ಯ ಸಿಟಿ ಮಂದಿಯನ್ನು ಬೆಚ್ಚಿ ಬೀಳಿಸಿದೆ. ಮಾಚೋಹಳ್ಳಿ ಗೇಟ್ ನ ಭೈರವೇಶ್ವರ ಕಾಂಪ್ಲೆಕ್ಸ್ ನಲ್ಲಿರುವ ರಾಮ್ ಜ್ಯುಚೆಲ್ಲರ್ಸ್ ನಲ್ಲಿ ಗುರುವಾರ ರಾತ್ರಿ 8:30ರ ಸುಮಾರಿಗೆ ಜ್ಯುವೆಲ್ಲರಿ ಮಾಲೀಕ ಕನ್ನಯ್ಯಲಾಲ್ ಶಾಪ್ ಕ್ಲೋಸ್ ಮಾಡೋ ಸಲುವಾಗಿ ಚಿನ್ನಾಭರಣ ಎತ್ತಿಡಲು ಮುಂದಾಗಿದ್ರು. ಈ ವೇಳೆ ಶಾಪ್ ಗೆ ಗನ್ ಹಿಡಿದು ಮೂರು ಎಂಟ್ರಿ ಕೊಟ್ಟಿದ್ದಾರೆ. ಟೇಬಲ್ ಮೇಲಿದ್ದ ಚಿನ್ನವನ್ನ ಬಾಚಿಕೊಂಡಿದ್ದಾರೆ. ಈ ವೇಳೆ ಕನ್ನಯ್ಯಲಾಲ್ ಕೂಗಾಡಿದ್ರು ಕನ್ನಯ್ಯಲಾಲ್ ಮತ್ತು ಸಿಬ್ಬಂದಿಯನ್ನ ತಳ್ಳಿ ಚಿನ್ನಾಭರಣ ದೋಚಿದ್ದಾರೆ. ಇತ್ತ ಕನ್ನಯ್ಯಲಾಲ್ ಕೂಗಾಟ ಕೇಳಿ ಪಕ್ಕದ ಅಂಗಡಿಯ ಹುಡುಗ ಬಂದಿದ್ದು ಆತನನ್ನ ತಳ್ಳಿ ಸಿಕ್ಕ ಚಿನ್ನವನ್ನ ದೋಚಿ ಮೂವರು ಆಗಂತಕರು ಎಸ್ಕೇಪ್ ಆಗಿದ್ದಾರೆ.

ಇನ್ನೂ ಘಟನೆ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಹಿನ್ನಲೆ ಘಟನಾಸ್ಥಳಕ್ಕೆ ನೆಲಮಂಗಲ ಡಿವೈಎಸ್ಪಿ, ಮಾದನಾಯಕನಹಳ್ಳಿ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸ್ರು ಬಲೆ ಬೀಸಿದ್ದಾರೆ. ಇನ್ನೂ ಕಳೆದ ವರ್ಷ ಇದೇ ರೀತಿ ಬ್ಯಾಡರಹಳ್ಳಿ, ಹಾಗೂ ಕೊಡಿಗೆಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯಲ್ಲೂ ಗುಂಡು ಹಾರಿಸಿ ಜ್ಯುವೆಲ್ಲರಿ ಶಾಪ್ ರಾಬರಿ ಮಾಡಿದ್ರು. ಸದ್ಯ ಗ್ರಾಮಾಂತರ ಭಾಗದಲ್ಲೂ ಇದೇ ರೀತಿ ರಾಬರಿ ನಡೆದಿದ್ದು, ಅದೃಷ್ಟವಶಾತ್ ಗನ್ ತೋರಿಸಿ ರಾಬರಿ ಮಾಡಿದ್ದು, ಯಾವೂದೇ ಫೈರಿಂಗ್ ನಡೆದಿಲ್ಲ ಎನ್ನಲಾಗಿದೆ.

ಒಟ್ಟಾರೆ ಸಿಲಿಕಾನ್ ಸಿಟಿಯಂತಹ ಮಹಾನಗರದಲ್ಲಿ ರಾಬರಿ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಸಿಟಿ ಮಂದಿಯನ್ನು ಆತಂಕಕ್ಕೀಡುಮಾಡಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!