
ಸರ್ಕಾರಿ ಶಾಲೆಯ (Government School) ಮುಖ್ಯ ಶಿಕ್ಷಕರೇ (Head Master) ಮದ್ಯಪಾನ ಮಾಡಿ, ಶಾಲೆಯ ಬಾಗಿಲ ಮುಂದೆಯೇ ಮಲಗಿದ ಘಟನೆ ರಾಯಚೂರಿನ (Raichur) ಮಸ್ಕಿ ತಾಲ್ಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ.
ಮದ್ಯಪಾನ ಮಾಡಿ ಶಾಲೆಗೆ ಬಂದ ಶಿಕ್ಷಕ
ಇನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಿಂಗಪ್ಪ ಎನ್ನುವ ವ್ಯಕ್ತಿ ಈ ರೀತಿ ಮದ್ಯಪಾನ ಮಾಡಿ ಬಂದು ಶಾಲೆಯ ಎದುರೇ ಮಲಗಿದ್ದು, ಅನೇಕ ಬಾರಿ ಈ ರೀತಿ ಕುಡಿದು ಶಾಲೆಗೆ ಬಂದಿದ್ದಾರೆ ಎನ್ನುವ ವಿಚಾರ ಇದೀಗ ಬಹಿರಂಗವಾಗಿದೆ. ಶಾಲೆಯಲ್ಲಿ ಕ್ಲಾಸ್ ಮಾಡುವ ವೇಳೆ ಮುಖ್ಯ ಶಿಕ್ಷಕ ಕುಡಿದು ಬಿದ್ದಿದ್ದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬಗ್ಗೆ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅಮಾನತು ಮಾಡಲು ಆಗ್ರಹ
ಶಿಕ್ಷಕರು ಎಂದರೆ ಮಕ್ಕಳ ಜೀವನವನ್ನ ರೂಪಿಸುವ ದೇವರು ಎಂದು ಪರಿಗಣಿಸಲಾಗುತ್ತದೆ. ಹಿಂದೆ ಗುರು ಇದ್ದರೆ ಮುಂದಿನ ಗುರಿ ತಲುಪುವುದು ಬಹಳ ಸುಲಭ ಎನ್ನುವ ನಂಬಿಕೆ ಇದೆ. ವಿದ್ಯಾರ್ಥಿಗಳ ಏಳಿಗೆಗೋಸ್ಕರ ಜೀವನವನ್ನ ಮುಡುಪಾಗಿಟ್ಟಿರುವ ಅನೇಕ ಶಿಕ್ಷಕರನ್ನ ನಾವು ಕಂಡಿದ್ದೇವೆ. ಆದರೆ ಅದಕ್ಕೆ ವಿರುದ್ಧವಾಗಿ, ಈ ಶಿಕ್ಷಕ ಮದ್ಯಪಾನ ಮಾಡಿ ಬಂದಿದ್ದು, ವಿದ್ಯಾರ್ಥಿಗಳಿಗೆ ಸಹ ಸಮಸ್ಯೆ ಆಗಲಿದೆ. ಇಡೀ ಶಾಲೆಯನ್ನ ನೋಡಿಕೊಂಡು, ಇತರರಿಗೆ ಮಾದರಿಯಾಗಬೇಕಿದ್ದ ವ್ಯಕ್ತಿಯೇ ತಪ್ಪು ದಾರು ತುಳಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಸಹ ಕಾರಣವಾಗಿದ್ದು, ಮುಖ್ಯ ಶಿಕ್ಷಕನನ್ನ ಅಮಾನತು ಮಾಡುವಂತೆ ಆಗ್ರಹ ಮಾಡಿದ್ದಾರೆ.






