ಪುತ್ತೂರು: ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಕ್ರಮ ಸಂಖ್ಯೆ 135/2017ರಡಿಯಲ್ಲಿ ಐಪಿಸಿ ಕಲಂ 379 (ಚೌರಿ) ಮತ್ತು 420 (ವಂಚನೆ) ಸಂಬಂಧಿತ ಪ್ರಕರಣದಲ್ಲಿ ಕಳೆದ ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿಯನ್ನು ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಬಂಧಿತನನ್ನು ಹಾಸನ ಜಿಲ್ಲೆಯ ಬೇಲೂರು ನಿವಾಸಿ ಔರಾನ್ @ ರಿಯಾಜ್ (33) ಎಂದು ಗುರುತಿಸಲಾಗಿದೆ.

ದಿನಾಂಕ 24-07-2025 ರಂದು ಉಪ್ಪಿನಂಗಡಿ ಠಾಣೆಯ ಉಪನಿರೀಕ್ಷಕ ಕೌಶಿಕ್ ಅವರ ನೇತೃತ್ವದಲ್ಲಿ, ಸಿಬ್ಬಂದಿಗಳಾದ ಪ್ರಶಾಂತ್ ರೈ,  ಶ್ರೀಶೈಲ ಎಂ.ಕೆ ಮತ್ತು ಮಹಮ್ಮದ್ ಮೌಲಾನಾ ರವರು ಹಾಸನ ಜಿಲ್ಲೆಯ ಬೇಲೂರು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ದಸ್ತಗಿರಿ ಮಾಡಿದ್ದಾರೆ.

ಬಂಧಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!