ಮಳೆಯ ರಜೆ ನಷ್ಟ ಭರಪೂರಿಗೆ ಶನಿವಾರ ಪೂರ್ಣ ತರಗತಿ – ಡಿಡಿಪಿಐ ಸೂಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶಾಲೆಗಳಿಗೂ ಪದವಿಪೂರ್ವ ಕಾಲೇಜುಗಳಿಗೂ ಘೋಷಿತ ರಜೆಗಳು ಮುಂದುವರಿದಿವೆ. ಈ ರಜೆಗಳಿಂದಾಗುವ ಪಾಠ ನಷ್ಟವನ್ನು ಪೂರೈಸುವ ಉದ್ದೇಶದಿಂದ, ಆ.15ರ ನಂತರ ಪ್ರತೀ ಶನಿವಾರ ಪೂರ್ಣ ದಿನ ತರಗತಿಗಳನ್ನು ನಡೆಸುವಂತೆ ಶಿಕ್ಷಣ ಇಲಾಖೆ ತೀರ್ಮಾನಿಸಿದ್ದು, ಈ ಕುರಿತು ಶೀಘ್ರದಲ್ಲೇ ಅಧಿಕೃತ ಸೂಚನೆ ಹೊರಡಿಸಲಾಗುವುದು.

ಜಿಲ್ಲಾಡಳಿತದಿಂದ ಈವರೆಗೆ ಒಟ್ಟು 7 ರಜೆಗಳನ್ನು ಘೋಷಿಸಲಾಗಿದೆ. ವಿವಿಧ ತಾಲೂಕುಗಳಲ್ಲಿ ಪರಿಸ್ಥಿತಿಗನುಗುಣವಾಗಿ ಹೆಚ್ಚಿನ ರಜೆಗಳನ್ನೂ ನೀಡಲಾಗಿದೆ. ಹೀಗಾಗಿ, ಈ ಎಲ್ಲಾ ರಜೆಗಳಿಂದ ಉಂಟಾಗುವ ಪಾಠ ನಷ್ಟವನ್ನು ಸರಿದೂಗಿಸಲು ಶನಿವಾರ ಮಧ್ಯಾಹ್ನದ ಬಳಿಕವೂ ತರಗತಿಗಳನ್ನು ನಿರ್ವಹಿಸುವ ತೀರ್ಮಾನ ಕೈಗೊಳ್ಳಲಾಗಿದೆ.

ಈ ಕುರಿತು ಮಾಹಿತಿ ನೀಡಿದ ದ.ಕ. ಜಿಲ್ಲೆಯ ಡಿಡಿಪಿಐ ಗೋವಿಂದ ಮಡಿವಾಳ ಅವರು, “ಆ.15ರವರೆಗೆ ಮಳೆಯಿಂದ ಬರುವ ರಜೆಗಳನ್ನೆಲ್ಲಾ ಪರಿಗಣಿಸಿ, ಶನಿವಾರಗಳಲ್ಲಿಯೂ ಪೂರ್ಣ ಸಮಯ ಪಾಠ ನಡೆಯುವಂತೆ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!