ಪುತ್ತೂರು: ವಿದ್ಯಾರ್ಥಿಗಳು ಕೇವಲ ಪಾಠಶಾಲಾ ಜ್ಞಾನಕ್ಕೆ ಮಿತಿ ಮಾಡದೇ, ತಮ್ಮೊಳಗಿನ ಪ್ರತಿಭೆ ಹೊರ ತರುವ ನಿಟ್ಟಿನಲ್ಲಿ ಮನದ ಮಾತು ಆಲಿಸುವ ಅಭ್ಯಾಸ ಬೆಳೆಸಬೇಕು ಎಂದು ಪ್ರಗತಿ ಆಸ್ಪತ್ರೆಯ ಹಿರಿಯ ವೈದ್ಯೆ ಹಾಗೂ ಪ್ರಗತಿ ಹಾಸ್ಪಿಟಲ್ ಎಜುಕೇಷನ್ ಟ್ರಸ್ಟ್‌ನ ಟ್ರಸ್ಟಿ ಡಾ. ಸುಧಾ ಎಸ್. ರಾವ್ ಸಲಹೆ ನೀಡಿದರು.

ಅವರು ಬೋಳ್ವಾರ್ ಪುತ್ತೂರಿನ ಪ್ರಗತಿ ಪ್ಯಾರಾ ಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.

“ನೀವು ಹೊಂದಿರುವ ಪ್ರತಿಯೊಂದು ಪ್ರತಿಭೆ ಪ್ರತಿಭಾಸ್ಪದವಾಗಿರಬೇಕು. ಅದರ ಬಗ್ಗೆ ಮೊದಲಿಗೆ ನೀವು ನಂಬಿಕೆ ಇರಿಸಿಕೊಳ್ಳಬೇಕು. ಮನದ ಮಾತು ಆಲಿಸಿ, ಅದನ್ನು ಆಚರಿಸಿ, ಧೈರ್ಯದಿಂದ ಮುಂದೆ ನಡೆಯಿರಿ,” ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಸಂದೇಶ ನೀಡಿದರು.

ಮುಖ್ಯ ಅತಿಥಿಯಾಗಿ ಹಾಗೂ ತೀರ್ಪುಗಾರರಾಗಿ ಆಗಮಿಸಿದ್ದ ಬಿ.ಎಸ್.ಎನ್.ಎಲ್ ನಿವೃತ್ತ ಇಂಜಿನಿಯರ್ ರೋ. ದಾಮೋದರ ಕೆ.ಎ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕಾರಿ ಮಾತುಗಳನ್ನೂರಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಪ್ರೀತಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಂಕಿತಾ ಪ್ರಾರ್ಥಿಸಿ, ಉಪನ್ಯಾಸಕಿ ದೀಕ್ಷಾ ಸ್ವಾಗತಿಸಿ, ರೇಷ್ಮಾ ವಂದಿಸಿ, ಶಶಿಕುಮಾರ್ ನಿರೂಪಣೆ ನಿಭಾಯಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!