ಮಂಗಳೂರು: ಪಾಂಡವರಕಲ್ಲು ಮಡಂತ್ಯಾರ್‌ನ ಹಮೀದ್‌ ದಾರ್ಕಸ್ ಉಸ್ಮಾನ್ ಮತ್ತು ಮರಿಯಂ ದಂಪತಿಯ ಪುತ್ರಿ ಹಾಗೂ ಮಂಜನಾಡಿಯ ಮುಸ್ತಫಾ ಇಸ್ಮಾಯಿಲ್ ತೌಸೀಫ್ ಪಾರೆ ಅವರ ಪತ್ನಿ ಹಲೀಮಾ ಶಾಹಿನ್ ಡಿ. ಅವರಿಗೆ ಯೆನೆಪೋಯಾ ಡೀಮ್ಡ್ ಟು ಬಿ ಯುನಿವರ್ಸಿಟಿಯಿಂದ ಪಿಎಚ್‌ಡಿ ಪದವಿ ಪ್ರದಾನವಾಗಿದೆ.

“Protective Effect of Combination of Quercetin and Atorvastatin Against Diabetic Induced Complications in Wistar Albino Rats” ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿದ ಅವರು, ಯೆನೆಪೋಯಾ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಉಪಪ್ರಾಂಶುಪಾಲ ಡಾ. ರೊಕೆಯಾ ಸುಲ್ತಾನಾ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದರು.

ಪ್ರಸ್ತುತ ಡಾ. ಹಲೀಮಾ ಶಾಹಿನ್ ಡಿ. ಯೆನೆಪೋಯಾ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಫಾರ್ಮಾಕೋಲಾಜಿ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!