ವಿಟ್ಲ: ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಎಂಬಲ್ಲಿ ಅಕ್ರಮವಾಗಿ ಮರಳನ್ನು ಹೊಳೆಯಿಂದ ಹೊರತೆಗೆಯುತ್ತಿದ್ದ ಅಡ್ಡೆ ಮೇಲೆ ವಿಟ್ಲ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಪ್ರಕರಣ ಸಂಬಂಧ ಪ್ರಮುಖ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

2025ರ ಆಗಸ್ಟ್ 1ರಂದು, ಆರೋಪಿತ ಅಬ್ದುಲ್ ಸಮದ್ ಎಂಬಾತನು ಹೊಳೆಯಿಂದ ಯಂತ್ರದ ಮೂಲಕ ಮರಳನ್ನು ಅಕ್ರಮವಾಗಿ ತೆಗೆಯುತ್ತಿದ್ದು, ಅದನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಉಪನಿರೀಕ್ಷಕರಾದ ರತ್ನಕುಮಾರ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿದರು.

ದಾಳಿ ವೇಳೆ ಕೇರಳ ಗಡಿಭಾಗದಿಂದ ಅಂದಾಜು ಒಂದು ಕಿಲೋಮೀಟರ್ ದೂರದ ಸಾಲೆತ್ತೂರು ಕಟ್ಟತ್ತಿಲ ಸೇತುವೆ ಬಳಿ, ಸುಮಾರು 2 ರಿಂದ 3 ಪಿಕಪ್‌ ನಷ್ಟು ಮರಳು, ಮರಳು ತೆಗೆಯಲು ಬಳಸುತ್ತಿದ್ದ ಯಂತ್ರ, ಕಬ್ಬಿಣದ ಜಾಲರಿ, ಪೈಬರ್ ಬುಟ್ಟಿಗಳು, ಕಬ್ಬಿಣದ ಹಾರೆ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ.

ಪೊಲೀಸರು ಸದ್ರಿ ವಸ್ತುಗಳನ್ನು ಸ್ಥಳದಲ್ಲೇ ವಶಪಡಿಸಿಕೊಂಡು, ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರಮ ಸಂಖ್ಯೆ 93/2025ರಂತೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!