ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರದ ಕಾಣಿಕೆ ಕಟ್ಟೆಗಳ ಬೀಗ ಒಡೆದು ಕಳ್ಳತನ ನಡೆಸಿದ ಪ್ರಕರಣವು ಬೆಳಕಿಗೆ ಬಂದಿದೆ. ಪ್ರಕರಣದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ಪಿರ್ಯಾದಿದಾರರಾದ ಡಿ. ನಾರಾಯಣ ರಾವ್ (ಪ್ರಾಯ: 72), ವಾಸ: ದೇಲಂತಬೆಟ್ಟು, ಕನ್ಯಾನ, ಬಂಟ್ವಾಳ, ಅವರು ಅಧ್ಯಕ್ಷರಾಗಿರುವ ಧಾರ್ಮಿಕ ಶ್ರದ್ಧಾ ಕೇಂದ್ರದ ಕಾಣಿಕೆ ಕಟ್ಟೆಗಳನ್ನು ದೇಲಂತಬೆಟ್ಟು ಶಾಲೆಯ ಪಕ್ಕದ ರಸ್ತೆಯ ಬದಿ ಹಾಗೂ ಚರ್ಚಿನ ಕೆಳಗಿನ ರಸ್ತೆಯ ಬದಿಯಲ್ಲಿ ಅಳವಡಿಸಲಾಗಿತ್ತು. ಅವರು ದಿನಾಂಕ 26-07-2025 ರಂದು ಭೇಟಿ ನೀಡಿದ ವೇಳೆ, ಕಟ್ಟೆಗಳ ಬೀಗ ಮುರಿದು ಹಣ ಕಳವುಗೊಂಡಿರುವುದು ಬೆಳಕಿಗೆ ಬಂದಿದೆ.

ಪ್ರಕರಣದಲ್ಲಿ ಸುಮಾರು ₹12,000 ರಿಂದ ₹15,000ರವರೆಗೆ ಹಣ ಕಳವುಗೊಂಡಿದ್ದು, ಪಿರ್ಯಾದಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ. 95/2025 ಕಲಂ 303(2) BNS ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಹಿನ್ನೆಲೆಯಲ್ಲಿ ಆರೋಪಿತರಾಗಿ ಗುರುತಿಸಲಾದವರು:

1. ತ್ವಾಹಿದ್‌ (19), ವಾಸ: ವಿಟ್ಲ ಕಸಬಾ ಗ್ರಾಮ


2. ಉಮ್ಮರ್‌ ಫಾರೂಕ್‌ (18), ವಾಸ: ವಿಟ್ಲ ಕಸಬಾ ಗ್ರಾಮ


3. ಮೊಹಮ್ಮದ್ ನಬೀಲ್‌ (18), ವಾಸ: ವಿಟ್ಲ ಕಸಬಾ ಗ್ರಾಮ



ಈ ಮೂವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!