ವಿಟ್ಲ, ಆ.2: ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕಾಶಿಮಠದ ಬಳಿ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶನಿವಾರ ಮಧ್ಯಾಹ್ನ ರಾಮಕೃಷ್ಣ ಉಪನಿರೀಕ್ಷಕರ ನೇತೃತ್ವದಲ್ಲಿ ನಡೆಸಿದ ತಪಾಸಣೆಯಲ್ಲಿ ಈ ಅಕ್ರಮ ಬಹಿರಂಗಗೊಂಡಿದೆ.

ತಪಾಸಣೆ ವೇಳೆ KA 01 AJ 9542 ಮತ್ತು KA 50 AF 3229 ನೋಂದಣಿಯ ಎರಡು ಲಾರಿಗಳಲ್ಲಿ ತಲಾ 500 ಕೆಂಪು ಕಲ್ಲುಗಳು ಪತ್ತೆಯಾಗಿವೆ. ಲಾರಿ ಚಾಲಕರನ್ನು ಪ್ರಶ್ನಿಸಿದಾಗ, ಅವರು ಈ ಸಾಗಾಟಕ್ಕೆ ಯಾವುದೇ ಅಧಿಕೃತ ಪರವಾನಿಗೆ ಹೊಂದಿರಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

ಆಕಸ್ಮಿಕ ತನಿಖೆಯ ವೇಳೆ, KA 01 AJ 9542 ಲಾರಿಗೆ ಕೇರಳದ ಪೆರ್ಲ ಎಂಬ ಪ್ರದೇಶದಿಂದ ಜಾಫರ್ ಎಂಬಾತನು ಕಲ್ಲುಗಳನ್ನು ಅಕ್ರಮವಾಗಿ ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ. KA 50 AF 3229 ಲಾರಿಯ ಕಲ್ಲುಗಳನ್ನು ಕೇರಳದ ಧರ್ಮತ್ತಡ್ಕದ ನಾಸೀರ್ ಅಕ್ರಮವಾಗಿ ಕಳುಹಿಸಿದ್ದ ಎಂದು ಹೇಳಲಾಗಿದೆ.

ಪೊಲೀಸರು ಲಾರಿಗಳನ್ನು ಹಾಗೂ ಚಾಲಕರನ್ನು ವಶಕ್ಕೆ ಪಡೆದು, ಪ್ರಕರಣವನ್ನು ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ. 94/2025, ಕಲಂ 303(2)(BNS), 4(1), 21 MMRD Act ಮತ್ತು 3, 44 KMMCR Act ಅಡಿಯಲ್ಲಿ ದಾಖಲಿಸಿದ್ದಾರೆ.

ಪೂರ್ಣ ತನಿಖೆ ಮುಂದುವರಿದ್ದು, ಅಕ್ರಮ ಗಣಿಗಾರಿಕೆ ಜಾಲದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!