ಕ್ಯಾಲಿಫೋರ್ನಿಯಾ: ಆ. 4, 2025 ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರ ನೇತೃತ್ವದ ಶಾಸಕರ ನಿಯೋಗವು ಅಮೆರಿಕದ ಪ್ರಸಿದ್ಧ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದು, ವೈದ್ಯಕೀಯ ತಂತ್ರಜ್ಞಾನ ಮತ್ತು ಆರೋಗ್ಯ ರಕ್ಷಣೆಯ ಹೊಸ ಆಯಾಮಗಳ ಕುರಿತು ಮಹತ್ವಪೂರ್ಣ ಮಾಹಿತಿಗಳನ್ನು ಪಡೆದುಕೊಂಡಿದೆ.

ಈ ನಿಯೋಗದಲ್ಲಿ ಮಂಜುನಾಥ್ ಭಂಡಾರಿ, ಪಿಎಂ ಅಶೋಕ್ ಪಟ್ಟಣ್, ದಿನೇಶ್ ಗೂಳಿ ಗೌಡ, ಶ್ರೀನಿವಾಸ್ ಮಾನೆ, ಗುರುರಾಜ್ ಗಂಟೆಹೊಳೆ, ಸುರೇಶ್ ಬಾಬು, ಅಶೋಕ್ ರೈ ಹಾಗೂ ಗುರ್ಮೆ ಸುರೇಶ್ ಶೆಟ್ಟಿ ಭಾಗಿಯಾಗಿದ್ದರು.

ಭೇಟಿಯ ಮುಖ್ಯ ಆಕರ್ಷಣೆಯಾಗಿ, ಶಾಸಕರು ಸ್ಟ್ಯಾನ್‌ಫೋರ್ಡ್ ಸ್ಕೂಲ್ ಆಫ್ ಮೆಡಿಸಿನ್‌ನ ಬಯೋಡಿಸೈನ್ ಲ್ಯಾಬ್ ಗೆ ಭೇಟಿ ನೀಡಿ, ಅಲ್ಲಿನ ಸಂಶೋಧನೆ ಹಾಗೂ ನವೀನ ಆವಿಷ್ಕಾರಗಳ ಬಗ್ಗೆ ವಿಶ್ಲೇಷಣೆ ನಡೆಸಿದರು. ಈ ವೇಳೆ ಡಾ. ಅನುರಾಗ್ ಮೈರಾಲ್, ಬಯೋಡಿಸೈನ್ ಸೆಂಟರ್‌ನ ಗ್ಲೋಬಲ್ ಔಟ್ರೀಚ್ ನಿರ್ದೇಶಕರಾಗಿ ನಿಯೋಗವನ್ನು ಸ್ವಾಗತಿಸಿದರು. ಅವರು ಸ್ಟ್ಯಾನ್‌ಫೋರ್ಡ್‌ನ ಸೆಂಟರ್ ಫಾರ್ ಇನ್ನೋವೇಶನ್ ಇನ್ ಗ್ಲೋಬಲ್ ಹೆಲ್ತ್ ನಲ್ಲಿ ಪ್ರಮುಖ ನೇತೃತ್ವ ವಹಿಸಿಕೊಂಡಿರುವು ವಿವರಿಸಿದರು.

ಈ ಭೇಟಿಯಿಂದ ಶಾಸಕರಿಗೆ ಜಾಗತಿಕ ಮಟ್ಟದ ವೈದ್ಯಕೀಯ ಸಂಶೋಧನೆಗಳು, ನವತಂತ್ರಗಳ ಪರಿಚಯ ಹಾಗೂ ಆರೋಗ್ಯ ಸೇವೆಗಳಲ್ಲಿನ ತಂತ್ರಜ್ಞಾನದ ಪ್ರಭಾವದ ಕುರಿತು ಆಳವಾದ ಅರಿವು ದೊರೆಯಿತು.

ಈ ಪ್ರಭಾವಶಾಲಿ ಭೇಟಿಯನ್ನು ಉದ್ಯಮಿ ಜೆಪಿ ಅವರ ಬೆಂಬಲದೊಂದಿಗೆ ಮಂಜುನಾಥ್ ಭಂಡಾರಿ ಅವರು ಸಂಯೋಜಿಸಿದರು.


Leave a Reply

Your email address will not be published. Required fields are marked *

Join WhatsApp Group
error: Content is protected !!