ಪುತ್ತೂರು, ಆ. 2:ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಅವರು ತಮ್ಮ ಆಡಳಿತಾತ್ಮಕ ಹಾಗೂ ಕ್ಷೇತ್ರ ಮಟ್ಟದ ಕಾರ್ಯ ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲೆಂದು, ಇಬ್ಬರು ಅನುಭವಸಂಪನ್ನ ವ್ಯಕ್ತಿಗಳನ್ನು ಸರ್ಕಾರಿ ಅಪ್ತ ಸಹಾಯಕರಾಗಿ (Personal Assistants) ನೇಮಕ ಮಾಡಿದ್ದಾರೆ.

1. ಜಯಪ್ರಕಾಶ್ ಎಣ್ಣೆಮಜಲು (ಬೆಂಗಳೂರು):
ಸುಳ್ಯ ಮೂಲದ ಜಯಪ್ರಕಾಶ್ ಎಣ್ಣೆಮಜಲು ಅವರು ಮಾಜಿ ಕೇಂದ್ರ ಸಚಿವರಾದ ಶ್ರೀ ಡಿ.ವಿ. ಸದಾನಂದ ಗೌಡ ಅವರ ಆಪ್ತ ಸಹಾಯಕರಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅನುಭವ ಹೊಂದಿದ್ದಾರೆ. ಸರ್ಕಾರದ ಕಾರ್ಯವಿಧಾನ, ಇಲಾಖೆಗಳ ಸಂವಹನ ಹಾಗೂ ಕಚೇರಿ ನಿರ್ವಹಣೆಯಲ್ಲಿ ನಿಪುಣರಾಗಿರುವ ಅವರು ಇನ್ನು ಮುಂದೆ ಬೆಂಗಳೂರಿನಲ್ಲಿ ಲಭ್ಯರಾಗಿರುತ್ತಾರೆ.
📞 ಸಂಪರ್ಕ ಸಂಖ್ಯೆ: 99804 94660

2. ಅವಿನಾಶ್ ಬಿ.ಆರ್. (ದಕ್ಷಿಣ ಕನ್ನಡ ಮತ್ತು ಉಡುಪಿ):
ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ (PDO) ಸೇವೆ ಸಲ್ಲಿಸಿದ್ದ ಅವಿನಾಶ್ ಬಿ.ಆರ್. ಅವರು ಸ್ಥಳೀಯ ಆಡಳಿತ, ಜಾಗೃತಿ ಕಾರ್ಯಗಳು ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ವಿಶೇಷ ಅನುಭವ ಹೊಂದಿದ್ದಾರೆ. ಮಂಗಳೂರು ಹಾಗೂ ಉಡುಪಿ ಪ್ರದೇಶಗಳಲ್ಲಿ ಇವರು ಲಭ್ಯವಿರುತ್ತಾರೆ.
📞 ಸಂಪರ್ಕ ಸಂಖ್ಯೆ: 97417 60738

ಕಿಶೋರ್ ಕುಮಾರ್ ಅವರಿಂದ ಅಥವಾ ಅವರ ಕಚೇರಿಯಿಂದ ನಿರ್ವಹಿಸಲ್ಪಡುವ ಯಾವುದೇ ಕೆಲಸಗಳಿಗಾಗಿ ಸಾರ್ವಜನಿಕರು ಹಾಗೂ ಅಧಿಕಾರಿಗಳು ಈ ಇಬ್ಬರನ್ನು ನೇರವಾಗಿ ಸಂಪರ್ಕಿಸಬಹುದು.

“ಇವರ ಸಹಕಾರದೊಂದಿಗೆ ನಾನು ಶಿಸ್ತುಬದ್ಧ, ಪರಿಣಾಮಕಾರಿ ಹಾಗೂ ಜನಪರ ಸೇವೆಗೆ ಸದಾ ಬದ್ಧನಾಗಿದ್ದೇನೆ,” ಎಂದು ಶಾಸಕ ಕಿಶೋರ್ ಕುಮಾರ್ ಹೇಳಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!