ಪುತ್ತೂರು: ಮಾನ್ಯ ಪುತ್ತೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಹಾಗೂ ಉಪ್ಪಿನಂಗಡಿ ಠಾಣೆಯ ಪೊಲೀಸ್ ಉಪನಿರೀಕ್ಷಕ ಶ್ರೀ ಕೌಶಿಕ್ ಅವರ ನೇತೃತ್ವದಲ್ಲಿ ರಚಿಸಲಾದ ವಿಶೇಷ ತಂಡವು, ಹಲವಾರು ವಾರಂಟು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಹಾಸನ ಜಿಲ್ಲೆ ಬಿಟ್ಟಗೌಡನಹಳ್ಳಿ ಎಂಬಲ್ಲಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದೆ.

ಆಗಸ್ಟ್ 04, 2025ರಂದು, ವಿಶೇಷ ತಂಡದ ಸಿಬ್ಬಂದಿಗಳಾದ ಸಿ.ಹೆಚ್.ಸಿ. 685 ಪ್ರಶಾಂತ್ ರೈ, ಸಿ.ಪಿ.ಸಿ. 2283 ಶ್ರೀಶೈಲ ಎಂ.ಕೆ, ಸಿ.ಪಿ.ಸಿ. 2404 ಮಹಮ್ಮದ್ ಮೌಲಾನಾ ಹಾಗೂ ವಾರಂಟ್ ಸಿಬ್ಬಂದಿ ಸಿ.ಹೆಚ್.ಸಿ. 826 ಶಿವರಾಮ ರೈ ಅವರು, ಪ್ರಖ್ಯಾತ ತನಿಖಾ ಕಾರ್ಯಚಟುವಟಿಕೆಯಿಂದ, ನ್ಯಾಯಾಲಯಕ್ಕೆ ಹಾಜರಾಗದೆ ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿ ಅಕ್ಬರ್ ಸುಹೈಬ್ (24), ತಂದೆ ಅಬ್ದುಲ್ ಮಜೀದ್, ಮೂಲತಃ ಮಂಗಳೂರು ತಲಪಾಡಿಯವರು, ಹಾಲಿ ವಿಳಾಸ ವಿಜಯನಗರ, ಹಾಸನ ಜಿಲ್ಲೆಯವರನ್ನು ಬಂಧಿಸಿದ್ದಾರೆ.

ಸದ್ರಿ ಆರೋಪಿಯ ವಿರುದ್ಧ ಉಪ್ಪಿನಂಗಡಿ ಠಾಣೆಯ ಅ.ಕ್ರ.: 98/2020 ಮತ್ತು 109/2020 ಸಂಬಂಧಿತವಾಗಿ SC No:5025/2021 ಹಾಗೂ CC No:276/2022 ಪ್ರಕರಣಗಳು ನಡುತ್ತಿದೆ. ಪುತ್ತೂರು ನ್ಯಾಯಾಲಯದಿಂದ ಆತನ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು. ಈತನ ಮೇಲೆ ಮಾತ್ರವಲ್ಲದೆ, ಬಂಟ್ವಾಳ ನಗರ, ಉಳ್ಳಾಲ, ಕೊಣಾಜೆ ಹಾಗೂ ಕೇರಳದ ಮಲಪ್ಪುರಂ ಪೊಲೀಸ್ ಠಾಣೆಗಳಲ್ಲಿಯೂ ವಾರಂಟ್ ದಾಖಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!