
ಧರ್ಮಸ್ಥಳ: 04 ಆಗಸ್ಟ್ 2025 ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಘಟನೆಯ ಕುರಿತು ಬೆಳ್ತಂಗಡಿ ತಾಲೂಕು ಇಚಿಲಂಪಾಡಿ ನಿವಾಸಿ ಜಯಂತ್ ಎಂಬವರು ತನಿಖೆಗೆ ಸಹಕಾರ ನೀಡುವ ಉದ್ದೇಶದಿಂದ ವಿಶೇಷ ತನಿಖಾ ತಂಡ (ಎಸ್‌ಐಟಿ) ಬೆಳ್ತಂಗಡಿ ಕಛೇರಿಗೆ ಭೇಟಿ ನೀಡಿದ್ದರು.
ಆದರೆ, ಎಸ್‌ಐಟಿ ಅಧಿಕಾರಿಗಳು ಈ ಸಂಬಂಧಿ ದೂರುವನ್ನು ಪರಿಶೀಲಿಸಿ, ಪ್ರಕರಣ ಸ್ಥಳಾಧಾರಿತವಾಗಿರುವ ಕಾರಣದಿಂದ, ಸ್ಥಳೀಯ ಠಾಣೆ ಮಟ್ಟದಲ್ಲಿ ದೂರು ದಾಖಲಿಸಬೇಕೆಂದು ಸೂಚನೆ ನೀಡಿದ್ದಾರೆ.
ಇದರಿಂದ, ಜಯಂತ್ ಅವರು 04.08.2025 ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ, ಸಂಬಂಧಿತ ವಿಷಯದ ಬಗ್ಗೆ ಅಧಿಕೃತ ದೂರು ಸಲ್ಲಿಸಿದ್ದರು. ಧರ್ಮಸ್ಥಳ ಠಾಣೆಯ ಅಧಿಕಾರಿಗಳು ಈ ದೂರನ್ನು 200/DPS/2025 ಎಂಬ ಪ್ರಥಮ ಮಾಹಿತಿ ವರದಿಯಾಗಿ ದಾಖಲಿಸಿಕೊಂಡಿದ್ದಾರೆ.
ಸದ್ಯ ಈ ದೂರಿನ ತನಿಖೆಗೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.






