ಪುತ್ತೂರು, ಆಗಸ್ಟ್ 5: ಫೇಸ್ಬುಕ್ ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ಧತೆಗೆ ಧಕ್ಕೆಯಾಗುವ ಹಾಗೂ ಅನ್ಯ ಸಮುದಾಯದ ವಿರುದ್ಧ ಅವಹೇಳನಕಾರಿ ಸಂದೇಶವನ್ನು ಹಂಚಿಕೊಂಡಿರುವ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಬ್ದುಲ್ ಕೆ. ಎಂಬ ಹೆಸರಿನ ಖಾತೆಯಿಂದ ಫೇಸ್ಬುಕ್‌ನಲ್ಲಿ ದಿನಾಂಕ 04-08-2025 ರಂದು ಇಂತಹ ಸಂದೇಶವನ್ನು ಹಂಚಲಾಗಿದ್ದು, ಅದು ಸಾಮಾಜಿಕವಾಗಿ ವ್ಯತಿರಿಕ್ತತೆ ಉಂಟುಮಾಡುವ ಹಾಗೂ ಕೋಮುಗಲಭೆಗೆ ಆಸ್ಪದ ನೀಡುವ ಸ್ವರೂಪದ್ದಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 67/2025, ಕಲಂ 196(1)(a), 353(2) BNS 2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!