
ನಮ್ಮ ಮೆಟ್ರೋ (Namma Metro) ಹಳದಿ ಮಾರ್ಗಕ್ಕೆ (Yellow Line) ಇಂದು ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿ (Narendra Modi), ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಜತೆಯಾಗಿ ಪ್ರಯಾಣಿಸಿದರು.
ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಮೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ ನೀಡಿದ ನಂತರ ಮೆಟ್ರೋ ಉದ್ಘಾಟನೆ ಮಾಡಲು ರಾಗಿಗುಡ್ಡಕ್ಕೆ ಬಂದರು.
ಈ ಸಂದರ್ಭದಲ್ಲಿ ಮೋದಿ ಯಾವುದೇ ವಿಷಯನ್ನು ಪ್ರಸ್ತಾಪಿಸಿದ್ದಾರೆ. ಈ ಮಾತನ್ನು ಕೇಳಿ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ಬಿದ್ದು ಬಿದ್ದು ನಕ್ಕಿದ್ದಾರೆ.
ಕರ್ನಾಟಕಕ್ಕೆ ಹೆಚ್ಚು ಒತ್ತುಕೊಡಬೇಕು ಎಂದಾಗ, ಸಾರ್ವಜನಿಕರು, ಹಾಗೂ ರಾಜ್ಯ ನಾಯಕರು ನಕ್ಕಾಗ, ಸಿಎಂ ಕೂಡಾ ಏನ್ರೀ ಎಲ್ಲ ನಗ್ತಿದೀರಿ ಎಂದು ಪ್ರಶ್ನೆ ಮಾಡಿ ನಗೆ ಬೀರಿದರು. ಭಾಷಣದ ಬಳಿಕ ಪ್ರಧಾನಿ ಬಳಿ ಕುಳಿತುಕೊಳ್ಳುವಾಗಲೂ ಸಣ್ಣ ಮಾತುಕತೆಯನ್ನು ನಡೆಸಿ ಪ್ರಧಾನಿ ಮುಖದಲ್ಲೂ ನಗು ತರಿಸಿದರು.
ಗುಜರಾತ್-ಮಹಾರಾಷ್ಟ್ರದಂತೆ ಕರ್ನಾಟಕಕ್ಕೂ ಒತ್ತುಕೊಡಿ : ಸಿಎಂ
ಕರ್ನಾಟಕದ ಮೆಟ್ರೋ ಯೋಜನೆಗಳಿಗೆ ಕೇಂದ್ರ ಕೊಡುತ್ತಿರುವ ಸಹಕಾರ ಸಾಲುತ್ತಿಲ್ಲ, ಗುಜರಾತ್-ಮಹಾರಾಷ್ಟ್ರದ ಅಭಿವೃದ್ಧಿಗೆ ಒತ್ತು ಕೊಟ್ಟಂತೆಯೇ ಕರ್ನಾಟಕಕ್ಕೂ ಪ್ರೋತ್ಸಾಹ ಕೊಡಿ ಎಂದು ಸಿಎಂ ಸಿದ್ದರಾಮಯ್ಯ, ವೇದಿಕೆಯಲ್ಲೇ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದರು.
ಬೆಂಗಳೂರಿನ ಐಐಐಟಿ ಆಡಿಟೋರಿಯಂ ನಲ್ಲಿ ನಡೆದ ಹಳದಿ ಮೆಟ್ರೋ ಮಾರ್ಗದ ಉದ್ಘಾಟನೆ ಹಾಗೂ 3ನೇ ಹಂತದ ಮೆಟ್ರೋ ಶಂಕುಸ್ಥಾಪನೆ ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಮಾತನಾಡಿದರು. ಪರೋಕ್ಷವಾಗಿ ಕರ್ನಾಟಕದ ಮೆಟ್ರೋ ಯೋಜನೆಗಳಿಗೆ ಕೇಂದ್ರ ಸರಕಾರ ಕೊಡುತ್ತಿರುವ ಸಹಕಾರ, ಅನುದಾನ ಸಾಲುತ್ತಿಲ್ಲ ಎಂದು ಸಿಎಂ ಅಸಮಾಧಾನ ಹೊರಹಾಕಿದರು.
ರಾಜ್ಯಸರ್ಕಾರವೇ ಹೆಚ್ಚು ಖರ್ಚು ಮಾಡುತ್ತಿದೆ!
ಬೆಂಗಳೂರು ಮೆಟ್ರೋ 2005 ರಲ್ಲಿ ಆರಂಭ ಆಯಿತು. ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಆರಂಭ ಆಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರುವ ಯೋಜನೆ ಇದು ಎಂದು ಸಿಎಂ ಹೇಳಿದರು.
ಇದರ ಒಪ್ಪಂದ ಏನಂದ್ರೆ, ಕೇಂದ್ರ ಸರಕಾರ 50% ಹಾಗೂ ರಾಜ್ಯ ಸರ್ಕಾರ 50% ಖರ್ಚು ಮಾಡುವ ಒಪ್ಪಂದ ಆಗಿರುವುದು. ಆದರೆ ರಾಜ್ಯ ಸರ್ಕಾರವೇ ಹೆಚ್ಚು ಖರ್ಚು ಮಾಡುತ್ತಿದೆ. ಕೇಂದ್ರ ಸರ್ಕಾರ ತಾಂತ್ರಿಕ ನೆರವು, ಹಣಕಾಸಿನ ನೆರವನ್ನು ಕೊಡುತ್ತದೆ. ಹಾಗಾಗಿ ಇದು ಜಂಟಿ ಕಾರ್ಯಕ್ರಮ ಅನ್ನುವುದು ಬಹಳ ಮುಖ್ಯ. ಸದ್ಯ ಬೆಂಗಳೂರಲ್ಲಿ 96.10 ಕಿ.ಮೀ ಉದ್ದದ ಮೆಟ್ರೋ ರೈಲ್ವೆ ಕೆಲಸ ಮುಗಿದಿದೆ. ಇದಕ್ಕೆ ರಾಜ್ಯ ಸರ್ಕಾರ 25,387 ಕೋಟಿ ಖರ್ಚು ಮಾಡಿದೆ. ಕೇಂದ್ರ ಸರ್ಕಾರ 7,468.86 ಕೋಟಿ ಮಾತ್ರ. ಆದ್ರೆ ಕೇಂದ್ರ ಸರಕಾರ ಸಾಲ ಕೊಟ್ಟಿದೆ. ಬಡ್ಡಿ ಸಮೇತ ಸಾಲ ವಾಪಸ್ ಕೊಡಬೇಕು. 3,987 ಕೋಟಿ ರೂ ಸಾಲ ಮರುಪಾವತಿಯನ್ನೂ ರಾಜ್ಯ ಸರ್ಕಾರದಿಂದ ಮಾಡಿದ್ದೇವೆ ಎಂದು ವಿವರಿಸಿದರು.
2030 ರ ವೇಳೆಗೆ 30 ಲಕ್ಷ ಜನ ಪ್ರಯಾಣ
2030 ಕ್ಕೆ 220 ಕಿಮೀ ಉದ್ದ ಮಾರ್ಗದ ಮೆಟ್ರೋ ಆರಂಭ ಆಗಲಿದೆ. ಇದರಿಂದ 30 ಲಕ್ಷ ಪ್ರಯಾಣಿಕರು ಪ್ರತೀದಿನ ಮೆಟ್ರೋ ಪ್ರಯಾಣ ಮಾಡಲು ಸಾಧ್ಯವಿದೆ ಎಂದು ಸಿಎಂ ತಿಳಿಸಿದರು.






