
ಕೊಡಿಪ್ಪಾಡಿ (ಆ.10): ಕೊಡಿಪ್ಪಾಡಿ ಬ್ರಾಂಚ್ ಸಮಿತಿಯ ಆಶ್ರಯದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷ ಸೇರ್ಪಡೆ ಕಾರ್ಯಕ್ರಮ ಭಾನುವಾರ ನಡೆಯಿತು.
ಪ್ರಸಕ್ತ ರಾಜಕೀಯ ಪರಿಸ್ಥಿತಿ ಹಾಗೂ ಪಕ್ಷದ ತತ್ವ-ಸಿದ್ಧಾಂತಗಳನ್ನು SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮೂನಿಶ್ ಅಲಿ ವಿವರಿಸಿದರು. ಚುನಾವಣಾ ಪೂರ್ವ ತಯಾರಿ ಕುರಿತು ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಲಕೆಮಜಲು ಮಾತನಾಡಿದರು.
ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ, ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಮಜೀದ್ ಕೊಡಿಪ್ಪಾಡಿ ಸೇರಿದಂತೆ ಹಲವಾರು ಯುವಕರು ನಾಯಕರ ಸಮ್ಮುಖದಲ್ಲಿ SDPIಗೆ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ SDPI ಪುತ್ತೂರು ಕ್ಷೇತ್ರ ಅಧ್ಯಕ್ಷ ಅಶ್ರಫ್ ಬಾವು, ಸದಸ್ಯ ಸಿರಾಜ್ ಕೂರ್ನಡ್ಕ, ಕಬಕ ಬ್ಲಾಕ್ ಅಧ್ಯಕ್ಷ ಸಿದ್ದೀಕ್ ಉರಿಮಜಲು, ಕಾರ್ಯದರ್ಶಿ ಎಂ.ಎಚ್. ಸದ್ದಾಂ ಮುರ, ಕೊಡಿಪ್ಪಾಡಿ ಬ್ರಾಂಚ್ ಅಧ್ಯಕ್ಷ ಫಾರೂಕ್ ಅರ್ಕ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಅದ್ದು ಕೊಡಿಪ್ಪಾಡಿ ಸ್ವಾಗತಿಸಿ, ಹಫೀಝ್ ಆನಾಜೆ ಧನ್ಯವಾದ ಸಲ್ಲಿಸಿದರು. ಇಬ್ರಾಹಿಂ ಆನಾಜೆ ಕಾರ್ಯಕ್ರಮವನ್ನು ನಿರೂಪಿಸಿದರು.






