ಪುತ್ತೂರು ಉಪವಿಭಾಗದ ಪೊಲೀಸ್‌ ಇಲಾಖೆ, ಮೂವರು ಆರೋಪಿಗಳನ್ನು ವಿವಿಧ ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

1. ಕಳವು ಪ್ರಕರಣದ ಆರೋಪಿ ಬಂಧನ
ಪುತ್ತೂರು ನಗರ ಠಾಣಾ ಅ.ಕ್ರ: 69/2023, ಕಲಂ 379 ಐಪಿಸಿ ಪ್ರಕರಣದಲ್ಲಿ 9 ಬಾರಿ ವಾರಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಾವೇರಿ ಜಿಲ್ಲೆಯ ಸವಣೂರು ನಿವಾಸಿ ಶಿವಕುಮಾರ್ ಅಲಿಯಾಸ್ ಶಿವು ಎಂಬಾತನನ್ನು, ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡರವರು ಹಾಗೂ ಪುತ್ತೂರು ನಗರ ಠಾಣಾ ಪಿ.ಐ ಕಿರಣ್ ಜಾನ್ಸನ್ ಡಿಸೋಜಾ ರವರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಪಿ.ಎಸ್.ಐ ಕೌಶಿಕ್ ನೇತೃತ್ವದ ತಂಡವು 12.08.2025 ರಂದು ಬೆಂಗಳೂರಿನ ಅಬ್ಜಿಗೆರೆಯಲ್ಲಿ ಬಂಧಿಸಿದೆ.

2. ದರೋಡೆ ಪ್ರಕರಣದ ಆರೋಪಿ ದಸ್ತಗಿರಿ
ಉಪ್ಪಿನಂಗಡಿ ಠಾಣಾ ಅ.ಕ್ರ: 14/2022, ಕಲಂ 394 ಐಪಿಸಿ ಪ್ರಕರಣದಲ್ಲಿ 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೆಂಗಳೂರು ಜಗಜೀವನ್ ರಾಮ್ ನಗರ ನಿವಾಸಿ ಸಯ್ಯದ್ ಕಲೀಂ ಅಲಿಯಾಸ್ ಕಲ್ಲು ಮಾಮು ಎಂಬಾತನನ್ನು, ಉಪ್ಪಿನಂಗಡಿ ವೃತ ನಿರೀಕ್ಷಕ ರವಿ ಬಿ.ಎಸ್ ಹಾಗೂ ಪಿ.ಎಸ್.ಐ ಕೌಶಿಕ್ ನೇತೃತ್ವದ ವಿಶೇಷ ತಂಡ ಬಂಧಿಸಿದೆ. ಆರೋಪಿಯ ವಿರುದ್ಧ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಇನ್ನೂ 4 ಪ್ರಕರಣಗಳು ದಾಖಲಾಗಿವೆ.

3. ಕಡಬ ಹಲ್ಲೆ ಪ್ರಕರಣದ ಆರೋಪಿ ಬಂಧನ
ಕಡಬ ಠಾಣಾ ಅ.ಕ್ರ: 91/2019, ಕಲಂ 341, 323, 324, 504, 506 R/w 34 ಐಪಿಸಿ ಪ್ರಕರಣದಲ್ಲಿ 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಡಬ ರಾಮಕುಂಜ ನಿವಾಸಿ ಯೂಸೂಫ್ (32) ಎಂಬಾತನನ್ನು ಕಡಬ ಪೊಲೀಸರು 12.08.2025 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!