ಉಡುಪಿ, ಸುಬ್ರಮಣ್ಯನಗರದಲ್ಲಿ ಆ.12ರ ರಾತ್ರಿ ನಡೆದ ಭೀಕರ ಘಟನೆಯಲ್ಲಿ 40 ವರ್ಷದ ವಿನಯ್ ದೇವಾಡಿಗ ಎಂಬಾತನನ್ನು ಅವನೇ ಸ್ನೇಹಿತರು ಹತ್ಯೆಗೈದಿದ್ದಾರೆ.

ಮೃತ ವಿನಯ್ ದೇವಾಡಿಗ ಸುಬ್ರಮಣ್ಯನಗರದ ನಿವಾಸಿ. ಈ ಕೊಲೆಯಲ್ಲಿ ಬ್ರಹ್ಮಾವರ ಕೊಕ್ಕರ್ಣೆಯ ಗಾಂಧಿನಗರದ ಅಜಿತ್ (28), ಅಕ್ಷೇಂದ್ರ (34) ಹಾಗೂ ಕೊಕ್ಕರ್ಣೆ ಬೆನಗಲ್‌ನ ಪ್ರದೀಪ್ ಆಚಾರ್ಯ ಎಂಬವರು ಆರೋಪಿಗಳಾಗಿದ್ದು, ಪೊಲೀಸರು ಇವರನ್ನು ಬಂಧಿಸಿದ್ದಾರೆ.

ವಿನಯ್, ಆರೋಪಿ ಅಕ್ಷೇಂದ್ರನಿಗೆ ಜೀವನ್ ಎಂಬಾತ ಬೈದಿರುವ ಆಡಿಯೋವನ್ನು ಇತರರಿಗೆ ಹಂಚಿ ವೈರಲ್ ಮಾಡಿದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ.12ರ ರಾತ್ರಿ ಮೂವರು ಆರೋಪಿಗಳು ಮನೆಯೊಳಗೆ ನುಗ್ಗಿ ಮಚ್ಚು ಹಾಗೂ ಚಾಕುವಿನಿಂದ ವಿನಯ್ ದೇವಾಡಿಗ ಅವರ ತಲೆಯನ್ನು ಕಡಿದು ಹತ್ಯೆಗೈದು, ಬಳಿಕ ಸ್ಕೂಟರ್‌ನಲ್ಲಿ ಪರಾರಿಯಾದರು ಎಂದು ದೂರಲಾಗಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Leave a Reply

Your email address will not be published. Required fields are marked *

Join WhatsApp Group
error: Content is protected !!