ಅಲಸ್ಕಾದಲ್ಲಿ ನಡೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ದ್ವಿಪಕ್ಷೀಯ ಮಾತುಕತೆ ಹಲವು ನಾಟಕೀಯ ಘಟನೆಗಳಿಗೆ ಸಾಕ್ಷಿಯಾಗಿದ್ದು, ಪ್ರಮುಖವಾಗಿ B-2 bomber ಪ್ರಹಸನ ಇದೀಗ ಜಗತ್ತಿನಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಉಕ್ರೇನ್‌-ರಷ್ಯಾ ಸಂಘರ್ಷಕ್ಕೆ ಅಂತ್ಯ ಹಾಡಿ, ಶಾಂತಿ ಸ್ಥಾಪಿಸುವ ಉದ್ದೇಶದಿಂದ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನಡುವೆ ಅಮೆರಿಕದ ಅಲಾಸ್ಕಾದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯಿತು.

ಮಾತುಕತೆ ಸಂಬಂಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ನಿಯೋಗದೊಂದಿಗೆ ಅಲಸ್ಕಾದ ವಿಶೇಷ ವಾಯುನೆಲೆಯಲ್ಲಿ ಬಂದಿಳಿದರು.

ಈ ವೇಳೆ ಸ್ವತಃ ಡೊನಾಲ್ಡ್ ಟ್ರಂಪ್ ವ್ಲಾಡಿಮಿರ್ ಪುಟಿನ್ ರನ್ನು ಸ್ವಾಗತಿಸಿ ವೇದಿಕೆಯತ್ತ ಕರೆತಂದರು. ಇದೇ ಸಂದರ್ಭದಲ್ಲಿ ಉಭಯ ನಾಯಕರ ತಲೆ ಮೇಲೆ ಅಮೆರಿಕ ಸೇನೆಯ ವಿಧ್ವಂಸಕ ಬಾಂಬರ್ ಫೈಟರ್ ಜೆಟ್ B-2 bomber ಹಾರಾಡಿದ್ದು, ಅದಕ್ಕೆಅಮೆರಿಕದ F-22 ರಾಪ್ಟರ್ ಫೈಟರ್‌ ಜೆಟ್ ಗಳು ಸಾಥ್ ನೀಡಿದವು. ಇದು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸೇನಾ ಗೌರವ ಎಂದ ಅಮೆರಿಕ

ಇನ್ನು ರಷ್ಯಾ ಅಧ್ಯಕ್ಷರ ಆಗಮನದ ವೇಳೆ ಯುದ್ಧ ವಿಮಾನಗಳು ಹಾರಾಡಿರುವ ಕುರಿತು ಮಾಹಿತಿ ನೀಡಿರುವ ಅಮೆರಿಕ ಇದು ಅತಿಥಿಗಳಿಗೆ ಅಮೆರಿಕದ ಸೇನಾ ಗೌರವ ಎಂದು ಹೇಳಿಕೊಂಡಿದೆ.

ಅದಾಗ್ಯೂ ಅಮೆರಿಕದ ಈ ನಡೆ ಜಗತ್ತಿನಾದ್ಯಂತ ವ್ಯಾಪಕ ಪರ-ವಿರೋಧ ಟೀಕೆಗಳಿಗೆ ಕಾರಣವಾಗಿದೆ. ಅಮೆರಿಕದ ಈ ನಡೆಯನ್ನು ಟೀಕಿಸಿರುವ ನೆಟ್ಟಿಗರು ಸದಾಕಾಲ ಆತಂಕದಲ್ಲೇ ಸಮಯ ಕಳೆಯುವ ಅಮೆರಿಕ ಪುಟಿನ್ ಭೇಟಿ ಸಂದರ್ಭದಲ್ಲೂ ತನ್ನ ಭಯವನ್ನು ಜಗಜ್ಜಾಹಿರು ಮಾಡಿದೆ.

ಬಿ2 ಬಾಂಬರ್ ಹಾರಿಸುವ ಮೂಲಕ ತಾನೆಷ್ಟು ಅಸುರಕ್ಷತೆ ಅನುಭವಿಸುತ್ತಿದೆ ತೋರಿಸಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!