
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ (Piyush goyal) ಲೋಕಸಭೆಯಲ್ಲಿ (Lok sabha) ಮಹತ್ವದ ಮಸೂದೆ ಮಂಡಿಸಲು (Bill amendment) ಮುಂದಾಗಿದ್ದು,ಇದೇ ಸೋಮವಾರ (ಆ.18) ರಂದು ಜೀವನ ನಿರ್ವಹಣೆ & ವ್ಯವಹಾರಗಳನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಮಸೂದೆಯ ಮಂಡನೆಗೆ ಮುಂದಾಗಿದ್ದು,ಸಣ್ಣ ಪ್ರಮಾಣದ ತಪ್ಪುಗಳಿಗೂ ಜೈಲು ಶಿಕ್ಷೆ ವಿಧಿಸುವಂತೆ ಮಾಡುವ ಕೆಲವು ಕಾನೂನುಗಳಿಗೆ ತಿದ್ದುಪಡಿ ತರಲು ಮುಂದಾಗಿದೆ.
ಹೌದು ಸಣ್ಣ ಪುಟ್ಟ ತಪ್ಪುಗಳಿಗೂ ಜೈಲು ಶಿಕ್ಷೆ ವಿಧಿಸಬಹುದಾದ ಕೆಲವು ನಿಬಂಧನೆಗಳನ್ನು ತೆಗೆದುಹಾಕಲು ಅಥವಾ ಅಪರಾಧಗಳ ಪಟ್ಟಿಯಿಂದ ಹೊರಗಿಡುವ ಉದ್ದೇಶ ಹೊಂದಿರುವ ‘ಜನ ವಿಶ್ವಾಸ (ತಿದ್ದುಪಡಿ) ಮಸೂದೆ-2025’ ಅನ್ನು ಸಚಿವ ಪಿಯೂಷ್ ಗೋಯಲ್ ಲೋಕಸಭೆಯಲ್ಲಿ ಮಂಡನೆ ಮಾಡಲಿದ್ದಾರೆ.
ಈ ಬಗ್ಗೆ ಲೋಕಸಭೆ ಅಧಿಕೃತ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದ್ದು ಈ ಪ್ರಕಾರವಾಗಿದೆ.ಜನರ ಜೀವನ ಮತ್ತು ವ್ಯವಹಾರಗಳನ್ನು ಸುಗಮಗೊಳಿಸುವ ಉದ್ದೇಶದಿಂದ, ಜೊತೆಗೆ ಆಡಳಿತದಲ್ಲಿ ವಿಶ್ವಾಸ ಹೆಚ್ಚಿಸುವ ಸಲುವಾಗಿ ಸಣ್ಣ ತಪ್ಪುಗಳನ್ನು ಅಪರಾಧ ಮುಕ್ತಗೊಳಿಸಲು,ತರ್ಕಬದ್ಧಗೊಳಿಸಲು ಕಾನೂನಿನಲ್ಲಿ ಮಾರ್ಪಾಡು ಮಾಡಲು ಅವಕಾಶ ಕಲ್ಪಿಸುವ ಮಸೂದೆಯನ್ನು ಸಚಿವರು ಮಂಡಿಸಲಿದ್ದಾರೆ ಎನ್ನಲಾಗಿದೆ.
ಈ ಉದ್ದೇಶದಿಂದಾಗಿ ಬಹುತೇಕ 350ಕ್ಕೂ ಹೆಚ್ಚು ನಿಬಂಧನೆಗಳಿಗೆ ತಿದ್ದುಪಡಿ ತರಲು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ. ಭಾರತದಾದ್ಯಂತ ವಾಣಿಜ್ಯ ಚಟುವಟಿಕೆಗಳನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಈ ಮಸೂದೆ ಉದ್ದೇಶ ಹೊಂದಿದೆ, ಹೀಗಾಗಿ ಜನರ ವ್ಯವಹಾರಗಳಿಗೆ ಅನುಕೂಲ ಮಾಡಿಕೊಡುವುದು & ಜನಸ್ನೇಹಿ ಪರಿಸರ ಸೃಷ್ಟಿಸುವುದು ಈ ಕ್ರಮದ ಉದ್ದೇಶ ಎಂದು ಸಂಬಂಧಪಟ್ಟ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದಾಯ ತೆರಿಗೆ ಮಸೂದೆ 2025 ಅಂಗೀಕಾರ :
ಇದಕ್ಕೂ ಮುನ್ನ ಆಗಸ್ಟ್ 11 ರಂಸು ಆದಾಯ ತೆರಿಗೆ ಮಸೂದೆ 2025 ಯನ್ನು ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದರು.ಕಳೆದ ಬಾರಿ ಹೊಸ ಆದಾಯ ತೆರಿಗೆ ಮಸೂದೆ ಸಿದ್ದವಾದಾಗ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಅದನ್ನ ಹಿಂಪಡೆಯಲಾಗಿತ್ತು.
ಅಲ್ಲದೇ, ಮಸೂದೆಯಲ್ಲಿ ಮಾಡಬೇಕಾದ ಬದಲಾವಣೆಗಳ ಕುರಿತು ಶಿಫಾರಸು ನೀಡಲು ಹಾಗೂ ಸಲಹೆಗಳನ್ನ ಕೊಡಲು ಸಮಿತಿಯೊಂದನ್ನ ರಚನೆ ಮಾಡಲಾಗಿತ್ತು. ಸಮಿತಿಯು ಜುಲೈ 21 ರಂದು ತನ್ನ ಶಿಫಾರಸುಗಳನ್ನು ಸಲ್ಲಿಸಿತು ಆಯ್ಕೆ ಸಮಿತಿಯ ಬಹುತೇಕ ಎಲ್ಲಾ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿದೆ.ಇದೀಗ ಆ ಸಮಿತಿ ಕೊಟ್ಟ ಸಲಹೆಗಳನ್ನ ಸೇರಿಸಿಕೊಂಡು, ನಿರ್ಮಲಾ ಸೀತಾರಾಮನ್ ಅವರು ಹೊಸ ಮಸೂದೆಯನ್ನ ಮಂಡನೆ ಮಾಡಿದ್ದರು.ಈ ಮಸೂದೆ ಅಂಗೀಕಾರಗೊಂಡಿದೆ






