
ಪುತ್ತೂರು: ಮಾನ್ಯ ಪುತ್ತೂರು ಉಪವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡ ಹಾಗೂ ಬೆಳ್ಳಾರೆ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಈರಯ್ಯ ಡಿ. ರವರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕರಾದ ಕೌಶಿಕ್ ರವರ ನೇತೃತ್ವದಲ್ಲಿ ರಚಿಸಲಾದ ವಿಶೇಷ ಪೊಲೀಸ್ ತಂಡವು ಮಹತ್ವದ ಕಾರ್ಯಾಚರಣೆ ನಡೆಸಿದೆ.
ಆಗಸ್ಟ್ 16, 2025 ರಂದು ವಿಶೇಷ ತಂಡದ ಸಿಬ್ಬಂದಿಗಳಾದ ಸಿಹೆಚ್‌ಸಿ 685 ಪ್ರಶಾಂತ ರೈ, ಸಿಹೆಚ್‌ಸಿ 1028 ಗಣೇಶ ಎನ್., ಸಿಪಿಸಿ 2283 ಶ್ರೀಶೈಲ ಎಂ.ಕೆ., ಸಿಪಿಸಿ 1926 ರಮೇಶ್ ರವರ ಸಹಕಾರದಿಂದ, ಕೇರಳದ ಕಣ್ಣೂರು ಜಿಲ್ಲೆಯ ಅಲಕ್ಕೋಡ್ ಎಂಬಲ್ಲಿ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿ ಉನ್ಮೇಶ (ತಂದೆ: ಉದಯಕುಮಾರ, ವಾಸ: ಒಳವತ್ತೂರು ಮನೆ, ಚುಕ್ಕಾಡ ಮನ್ನಕಲವು ಅಂಚೆ, ವೆಲ್ಲಾಡು ಗ್ರಾಮ, ತಲಿಪರಂಬ ತಾಲೂಕು, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ) ಅವರನ್ನು ದಸ್ತಗಿರಿ ಮಾಡಲಾಗಿದೆ.
ಸದರಿ ಆರೋಪಿ ಬೆಳ್ಳಾರೆ ಠಾಣಾ ಅ.ಕ್ರ. 56/2020 ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ಸುಳ್ಯ ನ್ಯಾಯಾಲಯ ಹೊರಡಿಸಿದ ಸಿಸಿ ನಂ. 524/2021 ವಾರಂಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು.
ಇದೇ ವೇಳೆ, ಉನ್ಮೇಶನ ವಿರುದ್ಧ ಕೇರಳದ ಅಲಕ್ಕೋಡ್ ಪೊಲೀಸ್ ಠಾಣೆಯಲ್ಲಿ 12 ಪ್ರಕರಣಗಳು ದಾಖಲಾಗಿದ್ದು ತನಿಖೆಯಲ್ಲಿವೆ ಎಂದು ತಿಳಿದುಬಂದಿದೆ.






