
ಪುತ್ತೂರು: ರಕ್ತಪರೀಕ್ಷೆ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಪಾರದರ್ಶಕ ಹಾಗೂ ನಿಖರ ಫಲಿತಾಂಶ ನೀಡುವ ಮೂಲಕ ಹೆಸರು ಮಾಡಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಇಂದು ಪುತ್ತೂರಿಗಷ್ಟೇ ಸೀಮಿತವಾಗದೆ ಹತ್ತೂರಿನಲ್ಲೂ ಚಿರಪರಿಚಿತವಾಗಿದೆ.
21 ವರ್ಷಗಳ ಹಿಂದೆ ಕನಸುಗಾರ ಚೇತನ್ ಪ್ರಕಾಶ್ ಕಜೆ ಅವರ ಕೈಚಳಕದಿಂದ ಆರಂಭವಾದ ಈ ಲ್ಯಾಬೋರೇಟರಿ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಅತೀ ದೊಡ್ಡ ಕ್ಲಿನಿಕಲ್ ಲ್ಯಾಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, ಪಾರದರ್ಶಕ ವರದಿ ಹಾಗೂ ವೈದ್ಯರಿಂದ ನೇರ ಶಿಫಾರಸ್ಸುಗಳು ಸಂಸ್ಥೆಯ ನಂಬಿಕೆ ಮತ್ತು ಬೆಂಬಲಕ್ಕೆ ಆಧಾರವಾಗಿವೆ.
💥ಎಂಟು ಕಡೆಗಳಲ್ಲಿ ಧನ್ವಂತರಿ ಸೇವೆ💥
2004ರಲ್ಲಿ ಧನ್ವಂತರಿ ಆಸ್ಪತ್ರೆಯ ಒಳಾಂಗಣದಲ್ಲಿ ಚಾಲನೆ ಪಡೆದ ಲ್ಯಾಬೋರೇಟರಿ, ಕ್ರಮೇಣ ದರ್ಬೆ (2006), ಬೊಳ್ವಾರು (2008), ಕೆಯ್ಯೂರು (2009), ಸುಳ್ಯ (2010), ಈಶ್ವರಮಂಗಲ (2016), ವಿಟ್ಲ (2022) ಹಾಗೂ ಇತ್ತೀಚಿಗೆ ಪುತ್ತೂರಿನ ನೆಹರುನಗರ (2025)ದಲ್ಲಿ ಶಾಖೆಗಳನ್ನು ಆರಂಭಿಸಿ ಸೇವಾ ವಿಸ್ತರಣೆ ಕಂಡಿದೆ.
ಗ್ರಾಮಾಂತರ ಪ್ರದೇಶಗಳಿಗೂ ತಲುಪುವ ಉದ್ದೇಶದಿಂದ ಮನೆಮನೆಯಿಂದಲೇ ರಕ್ತದ ಮಾದರಿ ಸಂಗ್ರಹಿಸಿ ವರದಿ ಒದಗಿಸುವ ಸೌಲಭ್ಯವನ್ನೂ ಲ್ಯಾಬೋರೇಟರಿ ಪ್ರಾರಂಭಿಸಿದೆ. ಎಲ್ಲಾ ಪರೀಕ್ಷೆಗಳು ಸ್ವಯಂಚಾಲಿತವಾಗಿದ್ದು, ವರದಿಗಳಲ್ಲಿ ಸ್ಪಷ್ಟತೆ ಮತ್ತು ನಿಖರತೆ ದೊರೆಯುವುದರಿಂದ ಸಾಮಾನ್ಯ ಜನರ ಜೊತೆಗೆ ವೈದ್ಯ ಸಮುದಾಯವೂ ಇದನ್ನು ಶಿಫಾರಸ್ಸು ಮಾಡುತ್ತಿದೆ.
💥50 ವರ್ಷಗಳ ಒಟ್ಟುಗೂಡಿದ ಅನುಭವ💥
ಲ್ಯಾಬೋರೇಟರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿಪರ ಸಿಬ್ಬಂದಿಗಳು ಒಟ್ಟುಗೂಡಿದಂತೆ ಅರ್ಧ ಶತಮಾನಕ್ಕೂ ಅಧಿಕ ಅನುಭವ ಹೊಂದಿದ್ದಾರೆ. 19ಕ್ಕೂ ಮಿಕ್ಕಿ ಅತ್ಯಾಧುನಿಕ ಉಪಕರಣಗಳ ಬಳಕೆ, ಅಗತ್ಯಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನಗಳ ಅಳವಡಿಕೆ ಹಾಗೂ 24/7 ಸೇವೆ ಲಭ್ಯವಿರುವುದು ಸಂಸ್ಥೆಯ ವಿಶೇಷತೆ.
💥ದಕ್ಷಿಣ ಕರ್ನಾಟಕದ ಪ್ರಥಮ ಅಲರ್ಜಿ ಲ್ಯಾಬ್💥
ಪುತ್ತೂರಿನ ಧನ್ವಂತರಿ ಲ್ಯಾಬೋರೇಟರಿ ದಕ್ಷಿಣ ಕರ್ನಾಟಕದಲ್ಲೇ ಮೊಟ್ಟ ಮೊದಲ ಬಾರಿಗೆ Alex 2 Allergy Explorer ಉಪಕರಣವನ್ನು ಅಳವಡಿಸಿಕೊಂಡಿದೆ.
👉 ಒಂದೇ ರಕ್ತಪರೀಕ್ಷೆಯಲ್ಲಿ 300ಕ್ಕೂ ಹೆಚ್ಚು ಅಲರ್ಜಿ ಅಂಶಗಳ ತಪಾಸಣೆ
👉 ಸಸ್ಯಾಹಾರ, ಮಾಂಸಾಹಾರ, ಪ್ರಾಣಿಪಕ್ಷಿಗಳು, ಗಾಳಿ, ಈಸ್ಟ್ ಮುಂತಾದ ಅಲರ್ಜಿಗಳ ನಿಖರ ಪತ್ತೆ
👉 ಮಣಿಪಾಲ, ಉಡುಪಿ, ಕಾಸರಗೋಡು ಸೇರಿದಂತೆ ಸಮೀಪದ ಜಿಲ್ಲೆಗಳಲ್ಲಿ ಎಲ್ಲಿಯೂ ಲಭ್ಯವಿಲ್ಲದ ವಿಶಿಷ್ಟ ಸೌಲಭ್ಯ
ಇದರಿಂದ ದಕ್ಷಿಣ ಕನ್ನಡದ ಪ್ರಥಮ ಅಲರ್ಜಿ ಲ್ಯಾಬೋರೇಟರಿ ಎಂಬ ಕೀರ್ತಿಯೂ ಧನ್ವಂತರಿಗೇ ಸೇರಿದೆ.
💥4 ನಿಮಿಷಗಳಲ್ಲಿ ರಿಪೋರ್ಟ್ ನೀಡುವ ವಿಶೇಷ ಸೆಲ್ ಕೌಂಟರ್💥
ಜಪಾನ್‌ನ HORIBA ಕಂಪನಿಯಿಂದ ಆಮದಿತ ವಿಶೇಷ ಸೆಲ್ ಕೌಂಟರ್ ಉಪಕರಣವನ್ನು ಲ್ಯಾಬೋರೇಟರಿ ಅಳವಡಿಸಿಕೊಂಡಿದೆ. ಇದರ ಮೂಲಕ:
ಕೇವಲ 4 ನಿಮಿಷಗಳಲ್ಲಿ ರಕ್ತಪರೀಕ್ಷೆ ಫಲಿತಾಂಶ
ಬ್ಯಾಕ್ಟೀರಿಯಾ ಹಾಗೂ ವೈರಲ್ ಇನ್‌ಫೆಕ್ಷನ್ ನಡುವಿನ ವ್ಯತ್ಯಾಸ ಪತ್ತೆ
ಜನರ ನಂಬಿಕೆಯ ಕೇಂದ್ರ
ಅಸಂಖ್ಯಾತ ಜನರ ನಂಬಿಕೆಗೆ ಪಾತ್ರವಾಗಿರುವ ಧನ್ವಂತರಿ ಲ್ಯಾಬೋರೇಟರಿ, ಪಾರದರ್ಶಕ ಹಾಗೂ ತ್ವರಿತ ಫಲಿತಾಂಶಗಳೊಂದಿಗೆ ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವೈದ್ಯಕೀಯ ಸೇವಾ ಕೇಂದ್ರವಾಗಿ ಗುರುತಿಸಿಕೊಂಡಿದೆ.






