
ಪುತ್ತೂರು: ಪುತ್ತೂರಿನ ಜನಮನ ಗೆದ್ದ ಜನಪದ ಸಾಂಸ್ಕೃತಿಕ ಉತ್ಸವ “ಪುತ್ತೂರುದ ಪಿಲಿಗೊಬ್ಬು” ಮೂರನೇ ವರ್ಷದ ಸೀಸನ್ 3 ಹಾಗೂ ಫುಡ್ ಫೆಸ್ಟ್ ಕಾರ್ಯಕ್ರಮ ಸೆಪ್ಟೆಂಬರ್ 28ರಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಮಾರುಗದ್ದೆಯಲ್ಲಿ ನಡೆಯಲಿದ್ದು, ಅದರ ಆಮಂತ್ರಣ ಪತ್ರವನ್ನು ಆಗಸ್ಟ್ 17ರಂದು ಶ್ರೀ ದೇವರ ಸನ್ನಿಧಿಯಲ್ಲಿ ವೈಭವೋಪೇತವಾಗಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಜಯ ಸಾಮ್ರಾಟ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ, ದ.ಕ. ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ ಬಳಜ್ಜ ಅವರೊಂದಿಗೆ ದೇವರ ಸನ್ನಿಧಿಯಲ್ಲಿ ತುಪ್ಪದ ದೀಪ ಬೆಳಗಿಸಿದರು. ಬಳಿಕ ಪ್ರಧಾನ ಅರ್ಚಕ ವೇ.ಮೂ. ವಿ.ಎಸ್ ಭಟ್ ಅವರ ಸತ್ಯಧರ್ಮ ನಡೆಯಲ್ಲಿ ದೇವರಲ್ಲಿ ವಿಶೇಷ ಪ್ರಾರ್ಥನೆ ನೆರವೇರಿತು.
“ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬರಲಿ” – ಈಶ್ವರ ಭಟ್ ಪಂಜಿಗುಡ್ಡೆ
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಮಾತನಾಡಿ, “ಮೂರನೇ ವರ್ಷದ ಪಿಲಿಗೊಬ್ಬು ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬರಲಿ ಎಂಬ ಉದ್ದೇಶದಿಂದ ದೀಪ ಬೆಳಗಿಸಲಾಯಿತು. ಸಮಿತಿಯ ಪರವಾಗಿ ಹಾಗೂ ವೈಯಕ್ತಿಕ ನೆಲೆಯಲ್ಲಿ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ” ಎಂದು ಹೇಳಿದರು.
“ನಮ್ಮ ಸಂಸ್ಕೃತಿಯನ್ನು ಬೆಳೆಸುವಲ್ಲಿ ಎಲ್ಲರ ಸಹಕಾರ ಬೇಕು” – ಸಹಜ್ ರೈ ಬಳಜ್ಜ
ವಿಜಯ ಸಾಮ್ರಾಟ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ ಮಾತನಾಡಿ, “2022ರಲ್ಲಿ ಆರಂಭಿಸಿದ ಪಿಲಿಗೊಬ್ಬು ಕಾರ್ಯಕ್ರಮದ ಮೊದಲ ಹಾಗೂ ಎರಡನೇ ಸೀಸನ್ ಭಾರೀ ಯಶಸ್ವಿಯಾಗಿದೆ. ತುಳುನಾಡಿನ ಧಾರ್ಮಿಕ ಹಿನ್ನೆಲೆಯ ಜನಪದ ಕಲೆಯಾದ ಹುಲಿವೇಷವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಮಂಗಳೂರು ಕಡೆ ನಡೆಯುವ ಪಿಲಿಗೊಬ್ಬನ್ನು ಪುತ್ತೂರಿನಲ್ಲೂ ಆಯೋಜಿಸಲು ನಿರ್ಧರಿಸಿದ್ದೇವೆ. ಈ ಬಾರಿ ಸೀಸನ್ 3 ಕಾರ್ಯಕ್ರಮದ ಜೊತೆಗೆ ಫುಡ್ ಫೆಸ್ಟ್ ಸಹ ನಡೆಯಲಿದೆ. ಸುಮಾರು 50 ಕ್ಕಿಂತ ಹೆಚ್ಚಿನ ಸ್ಟಾಲ್‌ಗಳು ಭಾಗವಹಿಸಲಿವೆ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಮತ್ತು ಆಶೀರ್ವಾದ ಅಗತ್ಯ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ಪುತ್ತೂರುದ ಪಿಲಿಗೊಬ್ಬು ಸಮಿತಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಸಂಚಾಲಕ ನಾಗರಾಜ್ ನಡುವಡ್ಕ, ಕಾರ್ಯಾಧ್ಯಕ್ಷ ಸುಜಿತ್ ರೈ ಪಾಲ್ತಾಡ್, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು, ಉಪಾಧ್ಯಕ್ಷರು ಶಂಕರ್ ಭಟ್ ಈಶಾನ್ಯ ಮತ್ತು ರತನ್ ರೈ ಕುಂಬ್ರ, ಕಾರ್ಯದರ್ಶಿಗಳಾದ ಶರತ್ ಕುಮಾರ್ ಮಾಡಾವು, ಅಶ್ವಿನ್ ರೈ, ಸುರೇಶ್ ಪಿದಪಟ್ಲ, ದಿನೇಶ್ ವಾಸುಕಿ, ಪವನ್ ಶೆಟ್ಟಿ ಕಂಬಳತ್ತಡ್ಡ, ಜೊತೆ ಕಾರ್ಯದರ್ಶಿಗಳಾದ ಧನುಷ್ ಹೊಸಮನೆ, ಆನಂದ ತೆಂಕಿಲ, ರಾಜೇಶ್ ರೈ ಪರ್ಪುಂಜ, ಸಂಘಟನಾ ಕಾರ್ಯದರ್ಶಿಗಳಾದ ಅರುಣ್ ರೈ, ಆದರ್ಶ್ ಶೆಟ್ಟಿ ಉಪ್ಪಿನಂಗಡಿ, ಕೋಶಾಧಿಕಾರಿಗಳಾದ ಅಶೋಕ್ ಅಡೂರು, ರಾಜೇಶ್ ಕೆ.ಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರದೀಪ್ ರೈ ಕರ್ನೂರ್, ನಿತೇಶ್ ನೆಲಪ್ಪಾಲ್, ನವೀನ್ ಗೌಡ, ಮೋಹನ್ ಕಬಕ, ಪ್ರೀತಮ್ ಶೆಟ್ಟಿ ಪೆರ್ನೆ, ಆದೇಶ್ ಶೆಟ್ಟಿ, ಪ್ರದೀಪ್ ರೈ ಮಾಡಾವು, ಸಚಿನ್ ಶೆಟ್ಟಿ ಪಟ್ಟೆ, ಚರಣ್ ಕುಲಾಲ್, ಹರೀಶ್ ಕುಲಾಲ್ ಬೆದ್ರಾಳ, ಗೌತಮ್ ಗೌಡ, ಜಗದೀಶ್ ಜಿ.ಆರ್ ನಾಯಕ್, ಪ್ರಜ್ವಲ್ ಎಂ.ಎಸ್, ಭರತ್ ಚನಿಲಾ, ಮಹೇಶ್ ಆಚಾರ್ಯ, ಉಮೇಶ್ ಹಡಿಲ್, ಸುದರ್ಶನ್ ರೈ ನೀರ್ಪಾಡಿ, ಕಿಶನ್ ರೈ, ಅಭಿಷ್ ಕೊಲಕೆಮಾರ್, ಚರಣ್ ರೈ ಮಠ, ನವೀನ್ ಪಡ್ನರು, ಹರ್ಷರಾಜ್, ಅಭಿಷೇಕ್ ಯಾದವ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.






