ಪುತ್ತೂರು: ಆಭರಣಗಳ ಅತ್ಯುತ್ತಮ ಸಂಗ್ರಹವನ್ನು ಸುಲ್ತಾನ್ ಡೈಮಂಡ್ ಆಂಡ್ ಗೋಲ್ಡ್ ಹೊಂದಿದೆ. ವಿಶೇಷವಾಗಿ ವಜ್ರ ಸಂಗ್ರಹ ಮೈನವಿರೇಳಿಸುವಂತಿದೆ ಎಂದು ತುಳು ಚಿತ್ರ ನಟಿ ಧನ್ಯಾ ಪೂಜಾರಿ ಹೇಳಿದರು.

ಪುತ್ತೂರಿನ ಏಳ್ಳುಡಿಯ ಸುಲ್ತಾನ್ ಡೈಮಂಡ್ ಆಂಡ್ ಗೋಲ್ಡ್ ಶೋರೂಂನಲ್ಲಿ ದಕ್ಷಿಣ ಭಾರತದ ಪ್ರೀಮಿಯರ್ ಆಭರಣ ಪ್ರದರ್ಶನ “ವಿಶ್ವ ವಜ್ರ – ಡೈಮಂಡ್ ಎಕ್ಸಿಬಿಷನ್” ಉದ್ಘಾಟಿಸಿ ಅವರು ಮಾತನಾಡಿದರು.

ಹೊಸ ವಿನ್ಯಾಸದ ಆಭರಣಗಳು
ಹೆಲ್ತ್ ಆಂಡ್ ಸ್ಯಾನಿಟರಿ ಇನ್‌ಸ್ಪೆಕ್ಟರ್ ಆಯಿಶಾ ಪೆರ್ನೆ ಮಾತನಾಡಿ, “ಹೊಸ ಹೊಸ ವಿನ್ಯಾಸದ ಆಭರಣಗಳನ್ನು ಸುಲ್ತಾನ್ ಪರಿಚಯಿಸುತ್ತಿದೆ. ಮೊದಲು ಮಂಗಳೂರಿಗೆ ತೆರಳಬೇಕಾಗಿದ್ದರೆ, ಈಗ ಪುತ್ತೂರಿನಲ್ಲೇ ಲಭ್ಯವಾಗುತ್ತಿರುವುದು ಸಂತಸದ ಸಂಗತಿ” ಎಂದರು.

ವಿಶೇಷ ಅತಿಥಿಗಳು
ಮುಸ್ಲಿಂ ಸಂಯುಕ್ತ ಜನರಲ್ ಸೆಕ್ರೆಟರಿ ಎಲ್.ಟಿ. ರಜಾಕ್, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯೆ ಸಾರಾ ಪರ್ಲಡ್ಕ, ದಿವ್ಯಾ ಸಂತೋಷ್ ರೈ, ಲಸ್ರಾದೋ ಮೆಟಲ್ ಮಾರ್ಟ್‌ನ ಜಸಿಂತಾ ಫೆರ್ನಾಂಡಿಸ್, ಬ್ರಾಂಚ್ ಮ್ಯಾನೇಜರ್ ಬಾಬು, ಮ್ಯಾನೇಜರ್‌ಗಳು ರಹಾವತ್, ಸಾಧಿಕ್, ಮಾರ್ಕೆಟಿಂಗ್ ಮ್ಯಾನೇಜರ್ ಹಮ್ರಾಝ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಮಾ ನಿರೂಪಿಸಿದರು.

ಅಂತಾರಾಷ್ಟ್ರೀಯ ವಜ್ರ ಸಂಗ್ರಹ
ಈ ಪ್ರದರ್ಶನದಲ್ಲಿ ಯುಎಸ್, ಬೆಲ್ಜಿಯಂ, ಟ್ರೆಡಿಷನಲ್, ಟರ್ಕಿ, ಮಿಡಲ್ ಈಸ್ಟ್, ಫ್ರೆಂಚ್, ಇಟಲಿ, ಸಿಂಗಾಪುರ ನ ಪ್ರಮಾಣೀಕೃತ ವಜ್ರ ಆಭರಣ ಸಂಗ್ರಹಗಳು ಪ್ರದರ್ಶನಗೊಳ್ಳುತ್ತಿವೆ. ಸೆಪ್ಟೆಂಬರ್ 5ರವರೆಗೆ ವಜ್ರ ಆಭರಣ ಖರೀದಿಗೆ ಪ್ರತಿ ಕ್ಯಾರೆಂಟ್‌ಗೆ ₹8,000 ರಿಯಾಯಿತಿ ಸೌಲಭ್ಯ ನೀಡಲಾಗಿದೆ.

ವೈವಿಧ್ಯಮಯ ವಿನ್ಯಾಸಗಳು
ಸಾಲಿಟೇರ್ ಕಲೆಕ್ಷನ್, ಕ್ಲೋಸ್ ಸೆಟ್ಟಿಂಗ್ ಸಂಗ್ರಹ, ತನ್ಮಾನಿಯಾ ಸಂಗ್ರಹ, ವಧು ವಜ್ರ ಆಭರಣ, ಕತ್ತರಿಸದ ವಜ್ರಗಳು, ರೂಬಿ-ಎಮರಾಲ್ಡ್ ರತ್ನಗಳ ಸಂಗ್ರಹಗಳು ಲಭ್ಯ. ದೈನಂದಿನ ಬಳಕೆಗೆ ಸೂಕ್ತವಾದ ಲೈಟ್ ವೇಟ್ ಡೈಮಂಡ್ ನೆಕ್ಲೇಸ್, ಬ್ಯಾಂಗಲ್‌ಗಳು ಹಾಗೂ ರಿಂಗ್‌ಗಳ ಸಂಗ್ರಹವೂ ಇದೆ.

ಮೂರು ದಶಕಗಳ ನಂಬಿಕೆ
ಮೂರು ದಶಕಗಳಿಂದ ವಿವಿಧ ಕಡೆ ಗ್ರಾಹಕರಿಗೆ ಸೇವೆ ನೀಡುತ್ತಿರುವ ಸುಲ್ತಾನ್ ಡೈಮಂಡ್ ಆಂಡ್ ಗೋಲ್ಡ್, ಪುತ್ತೂರಿನಲ್ಲಿ ಒಂದು ವರ್ಷದಿಂದ ವಿಭಿನ್ನ ವಿನ್ಯಾಸದ ಆಭರಣಗಳ ಮೂಲಕ ಗ್ರಾಹಕರ ಮನಸೂರೆ ಮಾಡಿಕೊಂಡಿದೆ. ವಿವಿಧ ಆಕರ್ಷಕ ಕೊಡುಗೆಗಳ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!