
ಪುತ್ತೂರು: ಪ್ರಗತಿ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸಸ್ ಹಾಗೂ ಪ್ರಗತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ವತಿಯಿಂದ “Dazzle–2025” ವಾರ್ಷಿಕೋತ್ಸವವು ಸೆಪ್ಟೆಂಬರ್ 18, ಗುರುವಾರ ಬೆಳಿಗ್ಗೆ 10 ಗಂಟೆಗೆ ಪುತ್ತೂರು ಟೌನ್ ಹಾಲ್‌ನಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ತಾಲೂಕು ಸರ್ಕಾರಿ ಆಸ್ಪತ್ರೆಯ ಡಾ. ಯದುರಾಜ್ ಡಿ.ಕೆ. ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಹಾಸ್ಪಿಟಲ್ ಎಜುಕೇಷನ್ ಟ್ರಸ್ಟ್® ಅಧ್ಯಕ್ಷರು ಡಾ. ಶ್ರೀಪತಿ ರಾವ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಂಜನೇಯ ರೆಡ್ಡಿ ಹಾಗೂ ಪ್ರಗತಿ ಹಾಸ್ಪಿಟಲ್ ಎಜುಕೇಷನ್ ಟ್ರಸ್ಟ್® ಟ್ರಸ್ಟಿ ಡಾ. ಸುಧಾ ಎಸ್. ರಾವ್ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಉಪ್ಪಿನಂಗಡಿ ಭಟ್ ನರ್ಸಿಂಗ್ ಹೋಮ್‌ನ ಹಿರಿಯ ವೈದ್ಯರಾದ ಡಾ. ಕೆ.ಜಿ. ಭಟ್ ಅವರನ್ನು ಸನ್ಮಾನಿಸಲಾಗುವುದು ಎಂದು ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ಪ್ರೀತಾ ಹೆಗ್ಡೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






