ಪುತ್ತೂರು: ಕೆದಿಲ ಗ್ರಾಮದ ಕೆದಿಲ–ಪನಡ್ಕ ರಸ್ತೆ ವಿವಾದ ಕೊನೆಗೂ ಇತ್ಯರ್ಥಗೊಂಡಿದ್ದು, ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ರಾಜಿ ಮಾತುಕತೆಯ ಮೂಲಕ ಸುಮಾರು 12 ವರ್ಷಗಳಿಂದ ಮುಂದುವರೆದಿದ್ದ ಸಮಸ್ಯೆಗೆ ಚುಕ್ಕಿ ಹಾಕಲಾಗಿದೆ.

ಈ ರಸ್ತೆ ಪ್ರಸನ್ನ ಭಟ್ ವಳಂಗಜೆ ಅವರ ಪಟ್ಟಾ ಜಾಗದ ಮೂಲಕ ಸಾಗುತ್ತಿದ್ದು, ಆ ಜಾಗದ ತಕರಾರಿನಿಂದ ವರ್ಷಗಳ ಕಾಲ ರಸ್ತೆ ಕಾಮಗಾರಿ ಸ್ಥಗಿತಗೊಂಡಿತ್ತು. ಫಲಾನುಭವಿಗಳು ಶಾಸಕರಲ್ಲಿ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ, ಅಶೋಕ್ ರೈ ನೇತೃತ್ವದಲ್ಲಿ ಪಂಜಿಗುಡ್ಡೆ ಈಶ್ವರಭಟ್ ಹಾಗೂ ಕಾಂಗ್ರೆಸ್ ಮುಖಂಡ ಲೋಕೇಶ್ ಪಡ್ಡೆಯೂರು ರಾಜಿ ಮಾತುಕತೆ ನಡೆಸಿ, ಭಟ್ ಅವರು ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದರು.

ಅದರಿಂದಾಗಿ ಬಹುಕಾಲದ ಕನಸಾದ ಈ ರಸ್ತೆಯ ಕಾಮಗಾರಿ ಪೂರ್ಣಗೊಂಡಿದ್ದು, ಕಾಂಕ್ರೀಟೀಕರಣಕ್ಕಾಗಿ ಶಾಸಕರು ₹5 ಲಕ್ಷ ಅನುದಾನವನ್ನು ಮೀಸಲಿಟ್ಟಿದ್ದಾರೆ.




ಫಲಾನುಭವಿಗಳಿಂದ ಕೃತಜ್ಞತಾ ನಮಸ್ಕಾರ

ರಸ್ತೆ ವಿವಾದ ಇತ್ಯರ್ಥಗೊಂಡ ಸಂತಸದಲ್ಲಿ ಸುಮಾರು 25 ಫಲಾನುಭವಿಗಳು ಶಾಸಕ ಅಶೋಕ್ ರೈ ಅವರ ನಿವಾಸಕ್ಕೆ ತೆರಳಿ ಕಾಲಿಗೆ ಬಿದ್ದು ಕೃತಜ್ಞತೆ ಸಲ್ಲಿಸಿದರು.
“12 ವರ್ಷಗಳಿಂದ ರಸ್ತೆ ಇಲ್ಲದೆ ಪರದಾಡುತ್ತಿದ್ದೆವು. ಇದೀಗ ಶಾಸಕರು ಇತ್ಯರ್ಥಮಾಡಿಕೊಟ್ಟಿದ್ದಾರೆ. ಈ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ,” ಎಂದು ಗ್ರಾಮಸ್ಥರು ಹೇಳಿದರು.




ಶಾಸಕ ಅಶೋಕ್ ರೈ ಹೇಳಿದರು:

“ರಸ್ತೆ ಸಮಸ್ಯೆಯ ಬಗ್ಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಖಾಸಗಿ ಜಾಗವಾಗಿದ್ದ ಕಾರಣ ಕೆಲಸ ಕಷ್ಟವಾಗಿತ್ತು. ಪ್ರಸನ್ನ ಭಟ್ ಅವರು ಮಾನವೀಯತೆ ಮೆರೆದಿದ್ದಾರೆ. ಸುಮಾರು 25 ಕುಟುಂಬಗಳಿಗೆ ಇದು ಪ್ರಯೋಜನವಾಗಿದೆ. ಮುಂದಕ್ಕೆ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು.”




ಪಂಜಿಗುಡ್ಡೆ ಈಶ್ವರಭಟ್ ಹೇಳಿದರು:

“ಇದು ಶಾಸಕರ ಮಾಡಿದ ಪುಣ್ಯದ ಕೆಲಸ. ಬಡವರ ಮನೆಗೆ ದಾರಿ ಮಾಡಿಕೊಟ್ಟಿದ್ದಾರೆ. ಹಲವು ವರ್ಷಗಳಿಂದ ಬೇಡಿಕೆ ಇತ್ತು, ಈಗ ಅದು ಈಡೇರಿದೆ. ಮುಂದಕ್ಕೆ ಈ ರಸ್ತೆ ಅಭಿವೃದ್ಧಿಯಾಗಲಿದೆ.”




ಕಾರ್ಯಕ್ರಮದಲ್ಲಿ ಹಾಜರಿದ್ದವರು:
ನಗರ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್ ಗೌಡ ಪಡ್ಡೆಯೂರು,
ಹರೀಶ್ ವಿ. ವಾಲ್ತಾಜೆ (ಅಧ್ಯಕ್ಷರು, ಕೆದಿಲ ಗ್ರಾಮ ಪಂಚಾಯತ್),
ಪ್ರಸನ್ನ ಭಟ್ ವಳಂಗಜೆ, ಸಾಹುಲ್ ಹಮೀದ್ ಕುಕ್ಕಾಜೆ, ಪ್ರಮೋದ್ ಅಡ್ಡಯೂರು, ಹರೀಶ್ ಬಂಗೇರ ಪಡ್ಡೆಯೂರು, ಪ್ರಕಾಶ್ ಗೌಡ ನೆಕ್ಕಿಲಾಡಿ, ಸೀತಾರಾಮ ಭಟ್ ಬಡೆಕ್ಕಿಲ, ಶಶಾಂಕ್ ಬಡೆಕ್ಕಿಲ, ವೆಂಕಪ್ಪ ಗೌಡ ಪನಡ್ಕ, ವಾರಿಜ ತಿಮ್ಮಕ್ಕ ಪೂವಪ್ಪ, ದಿವಾಕರ ನಾಯ್ಕ, ಪೂರ್ಣಿಮಾ ಯಶೋಧ, ವೆಂಕಪ್ಪ ರಾನ್ಯ, ಲಕ್ಷ್ಮಿ ಪನಡ್ಕ, ವನಿತ ವಲಂಕುಮೇರಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!