ಪುತ್ತೂರು: ಅ.20ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ರೈ ಎಸ್ಟೇಟ್ & ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಸಕ ಅಶೋಕ ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆಯಲಿರುವ ಅಶೋಕ ಜನಮನ ಕಾರ್ಯಕ್ರಮದ ಹಿನ್ನೆಲೆ ಪುತ್ತೂರು ನಗರ ವ್ಯಾಪ್ತಿಯಲ್ಲಿ ವಾಹನ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.

ಈ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ  ಆಗಮಿಸಲಿದ್ದು, ಸುಮಾರು 75,000ರಿಂದ 1 ಲಕ್ಷ ಜನರ ಆಗಮನದ ನಿರೀಕ್ಷೆಯ ಹಿನ್ನೆಲೆಯಲ್ಲಿ, ಸಂಚಾರ ಸುಗಮವಾಗುವಂತೆ 2025ರ ಅಕ್ಟೋಬರ್ 20ರಂದು ಬೆಳಿಗ್ಗೆ 8.00ರಿಂದ ಸಂಜೆ 6.00ರವರೆಗೆ ಈ ಕೆಳಗಿನಂತೆ ಸಂಚಾರ ಮಾರ್ಗ ಬದಲಾವಣೆ ಜಾರಿಗೊಳ್ಳಲಿದೆ.

ಸಂಚಾರ ಬದಲಾವಣೆ ವಿವರಗಳು:

> 🔹 ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹೊರಡುವ ಎಲ್ಲಾ ಬಸ್ಸುಗಳು ದರ್ಬೆ ಮುಖಾಂತರ ಅಶ್ವಿನಿ ವೃತ್ತದ ಕಡೆಗೆ ಸಂಚರಿಸಲಿವೆ.
🔹 ಮಂಗಳೂರು ಕಡೆಯಿಂದ ಪುತ್ತೂರು ಪೇಟೆಗೆ ಬರುವ ಎಲ್ಲಾ ಘನ ಮತ್ತು ಲಘು ವಾಹನಗಳು ಅನೇಟ್‌ ಜಂಕ್ಷನ್‌ನಿಂದ ಬೊಳುವಾರು ಮಾರ್ಗವಾಗಿ ಪಡೀಲು, ಕೋಟೇಚಾ ಮಾರ್ಗವಾಗಿ ಸಂಚರಿಸಬೇಕಾಗಿದೆ.
🔹 ಮಂಗಳೂರಿನಿಂದ ಉಪ್ಪಿನಂಗಡಿ ಕಡೆಗೆ ಸಂಚರಿಸುವ ವಾಹನಗಳು ಬನ್ನೂರು ಮಾರ್ಗವಾಗಿ ಪಡೀಲಿಗೆ ಬಂದು ಉಪ್ಪಿನಂಗಡಿ ರಸ್ತೆಯನ್ನು ಸಂಪರ್ಕಿಸಲಿವೆ.
🔹 ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಪೇಟೆಗೆ ಬರುವ ಎಲ್ಲಾ ವಾಹನಗಳು ಕೋಟೇಚಾ ಕ್ರಾಸ್ – ಎಪಿಎಂಸಿ ಮಾರ್ಗವಾಗಿ ಸಂಚರಿಸಲಿವೆ.
🔹 ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಪಡೀಲು – ಬನ್ನೂರು ಮಾರ್ಗವಾಗಿ ಪುತ್ತೂರು ನಗರಕ್ಕೆ ತೆರಳಲಿವೆ.

ಇದಲ್ಲದೆ, ಮಯೂರ ಜಂಕ್ಷನ್‌ನಿಂದ ಕೊಂಬೆಟ್ಟು ಮಾರ್ಗವಾಗಿ ಬೊಳುವಾರು ಕಡೆಗೆ ಹಾಗೂ ಮಹಾಲಿಂಗೇಶ್ವರ ದೇವಸ್ಥಾನ ಮಾರ್ಗವನ್ನು ಏಕಮುಖ ಸಂಚಾರ ಮಾರ್ಗವನ್ನಾಗಿ ಪರಿವರ್ತಿಸಲು ಜಿಲ್ಲಾಧಿಕಾರಿಗಳ ಅನುಮೋದನೆ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಸಂಚಾರ ಪೊಲೀಸರ ಮನವಿ:
ಪ್ರಜಾ ಸಹಕಾರದಿಂದ ಸಂಚಾರ ಸುಗಮವಾಗಲು ಸಾರ್ವಜನಿಕರು ನಿಗದಿತ ಮಾರ್ಗಗಳನ್ನು ಪಾಲಿಸಿ ಸಹಕಾರ ನೀಡುವಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಿಂದ ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!