ದೇಶದಲ್ಲಿ ರೀಲ್ಸ್ ಹುಚ್ಚಾಟಕ್ಕೆ ಮತ್ತೊಂದು ಸಾವು ಸಂಭವಿಸಿದ್ದು, ಹಳಿ ಮೇಲೆ ನಿಂತು ಯುವಕನೋರ್ವ ವಿಡಿಯೋ ಮಾಡುತ್ತಿದ್ದಾಗ ರೈಲು ಗುದ್ದಿಕೊಂಡು ಹೋಗಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.


ಒಡಿಶಾದ ಪುರಿಯಲ್ಲಿ ರೈಲ್ವೆ ಹಳಿಯಲ್ಲಿ ರೀಲ್ಸ್ ಚಿತ್ರೀಕರಿಸುತ್ತಿದ್ದ 15 ವರ್ಷದ ಬಾಲಕ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ.

ಮಂಗಳವಾರ ಜನಕ್‌ ದೇವ್‌ಪುರ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಮೂಲಗಳ ಪ್ರಕಾರ ಮಂಗಳಘಾಟ್‌ನ ನಿವಾಸಿ ವಿಶ್ವಜೀತ್ ಸಾಹು ತನ್ನ ತಾಯಿಯೊಂದಿಗೆ ದಕ್ಷಿಣಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಮನೆಗೆ ಹಿಂದಿರುಗುವಾಗ, ಸಾಮಾಜಿಕ ಮಾಧ್ಯಮಕ್ಕಾಗಿ ಸಣ್ಣ ವೀಡಿಯೊವನ್ನು ರೆಕಾರ್ಡ್ ಮಾಡಲು ವಿಶ್ವಜೀತ್ ಸಾಹು ರೈಲ್ವೆ ಹಳಿಗಳ ಬಳಿ ನಿಂತಿದ್ದ. ಈ ವೇಳೆ ರೈಲು ಬರುತ್ತಿರುವುದನ್ನು ಗಮನಿಸಿದ ವಿಶ್ವಜೀತ್ ಹಳಿಯ ತುದಿಯಲ್ಲಿ ನಿಂತು ರೈಲು ಹೋಗುವುದನ್ನು ಚಿತ್ರೀಕರಿಸಲು ಮುಂದಾದ.

ಈ ವೇಳೆ ರೈಲು ಆತನಿಗೆ ಢಿಕ್ಕಿಯಾಗಿ ಆತ ಕೂಡಲೇ ಕುಸಿದಿದ್ದಾನೆ. ಈ ವೇಳೆ ರೈಲು ಹಾದುಹೋಗುವ ಶಬ್ಧ ಕೂಡ ಮೊಬೈಲ್ ನಲ್ಲಿ ದಾಖಲಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಒಡಿಶಾ ರೈಲ್ವೆ ಪೊಲೀಸರು (ಜಿಆರ್‌ಪಿ) ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!