ಪುತ್ತೂರು: ಬೆಳೆಯುತ್ತಿರುವ ಪುತ್ತೂರಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ ಇಟ್ಟು ಕತ್ರಿಬೈಲ್ ಮಲ್ಟಿ–ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಮತ್ತು ಇಂಪ್ಲಾಂಟ್ ಸೆಂಟರ್ ತನ್ನ ಸೇವೆ ಆರಂಭಿಸಿದೆ. ನಗುಮುಖದ ಆರೈಕೆಗೆ ಅಗತ್ಯವಿರುವ ಎಲ್ಲಾ ರೀತಿಯ ಆಧುನಿಕ ದಂತ ಚಿಕಿತ್ಸೆಗಳು ಒಂದೇ ಸೂರಿನಡಿ ಲಭ್ಯವಾಗುತ್ತಿರುವುದು ಪುತ್ತೂರಿಗೆ ಹೆಮ್ಮೆಯ ವಿಚಾರವಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಟಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಭಾಸ್ಕರ್, “ನಗು ಮುಖದಿಂದ ಲೋಕ ಗೆಲ್ಲಬಹುದು. ಇಂತಹ ಅತ್ಯಾಧುನಿಕ ಸೌಲಭ್ಯಗಳಿರುವ ಕ್ಲಿನಿಕ್‌ಗಳು ಜನರ ಜೀವನಮಟ್ಟವನ್ನು ಸುಧಾರಿಸುತ್ತವೆ” ಎಂದು ಅಭಿಪ್ರಾಯಪಟ್ಟರು.

ಚೇತನಾ ಆಸ್ಪತ್ರೆಯ ಡಾ. ಜಿ.ಸಿ. ಅಡಿಗ ಅವರು ಮಾತನಾಡಿ, ಪುತ್ತೂರಿನಂತಹ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣಕ್ಕೆ ಈ ರೀತಿಯ ತಜ್ಞ ದಂತ ಚಿಕಿತ್ಸಾ ಕೇಂದ್ರದ ಅಗತ್ಯ ಇದ್ದದ್ದೇ ಎಂದು ಪ್ರಶಂಸಿಸಿದರು.

ಮಹಾವೀರ ಆಸ್ಪತ್ರೆಯ ಡಾ. ಸುರೇಶ್ ಪುತ್ತೂರಾಯ ಅವರು ತಂತ್ರಜ್ಞಾನಾಧಾರಿತ ದಂತ ಚಿಕಿತ್ಸೆಯ ಅಗತ್ಯವನ್ನು ಉಲ್ಲೇಖಿಸಿ, “ಜನರು ದಂತ ಆರೋಗ್ಯವನ್ನು ನಿರ್ಲಕ್ಷಿಸಬಾರದು, ಪ್ರತಿಯೊಬ್ಬರೂ ಸಮಯೋಚಿತ ಪರೀಕ್ಷೆ ಮಾಡಿಸಿಕೊಳ್ಳುವುದು ಅವಶ್ಯಕ” ಎಂದು ಸಲಹೆ ನೀಡಿದರು.

ಕ್ಲಿನಿಕ್‌ನಲ್ಲಿ ಪೆರಿಯೊಡಾಂಟಿಸ್ಟ್ ಡಾ. ಅಮಿತ್ ವಾಲ್ವೆಕರ್, ಆರ್ಥೋಡೆಂಟಿಸ್ಟ್ ಡಾ. ಮುರಳಿಧರ್, ಓರಲ್ ಸರ್ಜನ್ ಡಾ. ಸಂದೀಪ್, ಎಂಡೋಡೆಂಟಿಸ್ಟ್ ಡಾ. ಅನುಜ್ ಮತ್ತು ಓರಲ್ ಮೆಡಿಸಿನ್ ಹಾಗೂ ರೆಡಿಯೋಲಜಿ ತಜ್ಞ ಡಾ. ರಾಮಪ್ರಕಾಶ್  ಸೇವೆ ನೀಡಲಿದ್ದಾರೆ.

ಕ್ಲಿನಿಕ್‌ನ್ನು ಡಾ. ಶಂಕರ ನಾರಾಯಣ ಭಟ್ ಉದ್ಘಾಟಿಸಿದರು. ಶಿಕ್ಷಕರಾದ ಶ್ಯಾಮಣ್ಣ, ಡಾ. ಎ.ಪಿ. ಭಟ್, ಡಾ. ಎಂ.ಎಸ್. ಭಟ್, ಡಾ. ವಿ.ಪಿ. ಭಟ್ ಹಾಗೂ ಕಟ್ಟಡದ ಮಾಲೀಕ ದೀಪಕ್ ಡಯಾಸ್ ಶುಭ ಹಾರೈಸಿದರು.

ಕಾರ್ಯಕ್ರಮದ ಆರಂಭದಲ್ಲಿ ಶ್ರೇಯಾ ಪ್ರಾರ್ಥನೆ ಸಲ್ಲಿಸಿದರು. ಕತ್ತಿಬೈಲು ವೆಂಕಟೇಶ್ವರ ಶರ್ಮ ಸ್ವಾಗತಿಸಿದರು. ಸಂಸ್ಥೆಯ ಮಾಲೀಕ ಡಾ. ಶಂಕರಕೃಷ್ಣ ಕೆ. ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಕೆ. ಶಿವರಾಮ ಶರ್ಮ ನಿರೂಪಣೆ ನಡೆಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!