ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿ ಆಶ್ರಯದಲ್ಲಿ ನವಂಬರ್ 1ರಂದು ನಡೆಯುವ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕಿನ 12 ಮಂದಿ ಸಾಧಕರನ್ನು ಹಾಗೂ ಒಂದು ಸಂಸ್ಥೆಯನ್ನು ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಶಾಸಕ ಅಶೋಕ್‌ ಕುಮಾರ್ ರೈ ಕೆ.ಎಸ್. ಮಾರ್ಗದರ್ಶನದಲ್ಲಿ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು, ತಹಸೀಲ್ದಾ‌ರ್, ಬಿಇಓ, ತಾಪಂ ಇಓ, ಕಸಾಪ ಅಧ್ಯಕ್ಷರಿದ್ದ ಸಮಿತಿ ಈ ಆಯ್ಕೆ ನಡೆಸಿದೆ.

ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯ ಸಾಹಿತಿ ಡಾ. ನರೇಂದ್ರ ರೈ ದೇರ್ಲ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಜೆ.ಸಿ. ಅಡಿಗ, ಶಿಕ್ಷಣ ಕ್ಷೇತ್ರದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ. ಝೇವಿಯ‌ರ್ ಡಿಸೋಜಾ, ಸಾಹಿತ್ಯ ಕ್ಷೇತ್ರದಲ್ಲಿ ಡಾ. ರಾಜೇಶ್ ಬೆಜ್ಜಂಗಳ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಉದಯ ಕುಮಾರ್ ಯು.ಎಲ್., ಶಿಲ್ಪಕಲೆಯಲ್ಲಿ ಎಂ. ವಾಸುದೇವ ಆಚಾರ್ಯ ಬೆದ್ರಾಳ ನೆಕ್ಕರೆ, ಸಮಾಜಸೇವೆಯಲ್ಲಿ ಅಬೂಬಕ್ಕ‌ರ್ ಮುಲಾರ್‌ ಅಜ್ಜಿಕಟ್ಟೆ, ಶಿಕ್ಷಣ ಕ್ಷೇತ್ರದಲ್ಲಿ ರಮೇಶ್ ಉಳಯ, ಸಮಾಜ ಸೇವೆಯಲ್ಲಿ ಸಂಶುದ್ದೀನ್ ಸಾಲ್ಮರ ಪಂಜಳ ನರಿಮೊಗ್ರು ದೈವಾರಾಧನೆಯಲ್ಲಿ ಬಾಲಕೃಷ್ಣಪೂಜಾರಿ ಪಲ್ಲತ್ತಾ‌ರ್ ಕುಡಿಪ್ಪಾಡಿ, ಯಕ್ಷಗಾನ ಕ್ಷೇತ್ರದಲ್ಲಿ ವಿನೋದ್ ರೈ ಸೊರಕೆ, ರಂಗಭೂಮಿ ಕ್ಷೇತ್ರದಲ್ಲಿ ಬಿ. ಪವಿತ್ರ ಹೆಗ್ಡೆ ಪಡ್ಡಾಯೂರು ಪಡ್ನರು ಇವರನ್ನು ಆಯ್ಕೆ ಮಾಡಲಾಗಿದೆ

ಸಂಘ ಸಂಸ್ಥೆಯಲ್ಲಿ ಪುತ್ತೂರು ಜೆಸಿಐ ಅನ್ನು ಆಯ್ಕೆ ಮಾಡಲಾಗಿದೆ. ಜೆಸಿಐನ ಪ್ರಸ್ತುತ ಅಧ್ಯಕ್ಷ ಭಾಗ್ಗೇಶ್ ರೈ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!