ಪುತ್ತೂರು: ಬಹುಮುಖ ಪ್ರತಿಭೆ, ಖ್ಯಾತ ನಿರೂಪಕ, ಉತ್ತಮ ಸಂಘಟಕ ಹಾಗೂ ಸಮರ್ಪಿತ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ರವರು ಈ ವರ್ಷದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿ ಗ್ರಾಮದ ಪೊರ್ದಾಲ್ ನಿವಾಸಿಯಾದ ಬಾಲಕೃಷ್ಣ ರೈ ಅವರು ಲಿಟ್ಸ್ ಫ್ಲವರ್ ಶಾಲೆ, ದರ್ಬೆ, ಪುತ್ತೂರಿನಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕ ವೃತ್ತಿಯ ಜೊತೆಗೆ ಕಾರ್ಯಕ್ರಮ ನಿರೂಪಕ, ನಾಟಕ ಕಲಾವಿದ, ಕ್ರೀಡಾಪಟು, ಕಬಡ್ಡಿ ತರಬೇತುದಾರ, ಲೇಖಕ ಮತ್ತು ಪ್ರೇರಣಾದಾಯಕ ಭಾಷಣಕಾರರಾಗಿ ಅವರು ತಮ್ಮದೇ ವಿಶಿಷ್ಟ ಗುರುತನ್ನು ನಿರ್ಮಿಸಿಕೊಂಡಿದ್ದಾರೆ.

“ಜಯಶಾಲಿಗಳು ವಿಭಿನ್ನ ಕೆಲಸಗಳನ್ನೇನು ಮಾಡುವುದಿಲ್ಲ, ಮಾಡುವ ಕೆಲಸವನ್ನು ಮಾತ್ರ ವಿಭಿನ್ನವಾಗಿ ಮಾಡುತ್ತಾರೆ” ಎಂಬ ಶಿವ್ ಖೇರಾ ಅವರ ಮಾತಿನಂತೆ ಬಾಲಕೃಷ್ಣ ರೈ ಪೊರ್ದಾಲ್ ಅವರ ಜೀವನ ನಡವಳಿಕೆಯಾಗಿದೆ. ಅವರು ವೃತ್ತಿಯಲ್ಲಿ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಸೃಜನಾತ್ಮಕ ಕಲಾವಿದರು.

ಬಾಲ್ಯದಲ್ಲಿಯೇ ಪ್ರತಿಭಾವಂತ ವಿದ್ಯಾರ್ಥಿಯಾಗಿ, ಕ್ರೀಡಾಪಟುವಾಗಿ, ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡ ಇವರು 2009ರಿಂದ ಶಿಕ್ಷಕ ವೃತ್ತಿಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದು, 17 ವರ್ಷಗಳ ಶಿಕ್ಷಕ ಜೀವನದಲ್ಲಿ ಅನೇಕ ವಿದ್ಯಾರ್ಥಿಗಳಲ್ಲಿ ಪ್ರೇರಣೆಯ ದೀಪ ಬೆಳಗಿಸಿದ್ದಾರೆ.

ಅವರ ಸಾಧನೆಗಳಲ್ಲಿ:

1000ಕ್ಕೂ ಹೆಚ್ಚು ಕಾರ್ಯಕ್ರಮಗಳ ನಿರೂಪಣೆ, ಮಾನ್ಯ ಮುಖ್ಯಮಂತ್ರಿಗಳ ಉಪಸ್ಥಿತಿಯ ಕಾರ್ಯಕ್ರಮಗಳನ್ನೂ ಒಳಗೊಂಡಂತೆ.

“ಡ್ರಗ್ಸ್ ಮುಕ್ತ ಯುವ ಸಮಾಜ” ವಿಷಯದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ 250ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಲ್ಲಿ ಉಚಿತ ತರಬೇತಿ.

ರಾಷ್ಟ್ರಮಟ್ಟದ ಕಬಡ್ಡಿ ತರಬೇತುದಾರರಾಗಿ, ಸತತ 3 ಬಾರಿ ಕರ್ನಾಟಕ ತಂಡದ ತರಬೇತುದಾರರಾಗಿ ರಾಷ್ಟ್ರಮಟ್ಟದ ಆಯ್ಕೆ.

ಅವರ ತರಬೇತಿಯಲ್ಲಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಅಥ್ಲೆಟಿಕ್ ವಿಭಾಗದಲ್ಲಿ ಆಯ್ಕೆ.

ತ್ರೋಬಾಲ್ ಹಾಗೂ ಕಬಡ್ಡಿ ವಿಭಾಗಗಳಲ್ಲಿ ತಾಲೂಕು ಮತ್ತು ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಯಶಸ್ವಿ ಸಂಘಟಕ.


ಸಾಧನೆ, ಶ್ರಮ ಮತ್ತು ನಿಷ್ಠೆಗೂ ಆದರ್ಶವಾದ ಬಾಲಕೃಷ್ಣ ರೈ ಪೊರ್ದಾಲ್ ರವರು, ತಮ್ಮ ಪ್ರಾಮಾಣಿಕ ಸೇವೆ, ಕ್ರೀಡಾ-ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಕೊಡುಗೆಯಿಂದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದು ಪುತ್ತೂರಿನ ಹೆಮ್ಮೆಯ ವಿಷಯವಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!