ಪುತ್ತೂರು: ಅಂತರಾಷ್ಟ್ರೀಯ ರೋಟರಿ ಪ್ರಾಯೋಜಿತ ಸಂಸ್ಥೆಯಾದ ರೋಟರಿ ಫೌಂಡೇಶನ್ ವತಿಯಿಂದ ಜಿಲ್ಲಾ ಮಟ್ಟದ “The Rotary Foundation District Seminar 2025” ಕಾರ್ಯಕ್ರಮವು ನವೆಂಬರ್ 8 ಮತ್ತು 9ರಂದು ಮರೀಲ್‌ನಲ್ಲಿರುವ ಪುತ್ತೂರು ಕ್ಲಬ್‌ನಲ್ಲಿ ನಡೆಯಲಿದೆ. ಈ ಮಹತ್ವದ ಕಾರ್ಯಕ್ರಮದ ಆತಿಥ್ಯವನ್ನು ಪುತ್ತೂರು ರೋಟರಿ ಕ್ಲಬ್ ವಹಿಸಿಕೊಂಡಿದೆ.

1905ರಲ್ಲಿ ಕೇವಲ ನಾಲ್ಕು ಮಿತ್ರರೊಂದಿಗೆ ಪ್ರಾರಂಭವಾದ ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಇಂದು ವಿಶ್ವದಾದ್ಯಂತ ಲಕ್ಷಾಂತರ ಸದಸ್ಯರನ್ನು ಹೊಂದಿದೆ. 1965ರಲ್ಲಿ ಪುತ್ತೂರಿನ 34 ಮಂದಿ ಹಿರಿಯರ ದೃಷ್ಟಿಯಿಂದ ಹುಟ್ಟಿಕೊಂಡ ಪುತ್ತೂರು ರೋಟರಿ ಕ್ಲಬ್, ಕಳೆದ ಹಲವು ದಶಕಗಳಿಂದ ಸಮಾಜಮುಖಿ ಯೋಜನೆಗಳ ಮೂಲಕ ಪ್ರಾದೇಶಿಕ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿದೆ.

ರೋಟರಿ ಬ್ಲಡ್ ಬ್ಯಾಂಕ್, ಬ್ಲಡ್ ಕಲೆಕ್ಷನ್ ವ್ಯಾನ್, ಡಯಾಲಿಸಿಸ್ ಸೆಂಟರ್, ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಹಿಂದೂ ರುದ್ರಭೂಮಿ ಮುಂತಾದ ಶಾಶ್ವತ ಯೋಜನೆಗಳನ್ನು ಸುಮಾರು ₹4 ಕೋಟಿಗೂ ಮಿಕ್ಕಿ ವೆಚ್ಚದಲ್ಲಿ ರೋಟರಿ ಫೌಂಡೇಶನ್‌ನ ಸಹಕಾರ ಹಾಗೂ ಸದಸ್ಯರ ದೇಣಿಗೆಯ ಮೂಲಕ ಪೂರ್ಣಗೊಳಿಸಲಾಗಿದೆ. ಜೊತೆಗೆ ಉಚಿತ ಕೃತಕ ಅಂಗ ಜೋಡನಾ ಶಿಬಿರ, ಪ್ರತಿ ತಿಂಗಳು ಉಚಿತ ವೈದ್ಯಕೀಯ ಶಿಬಿರಗಳಂತಹ ಸೇವಾ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ.

ಈ ಸೇವಾ ಚಟುವಟಿಕೆಗಳನ್ನು ಪರಿಗಣಿಸಿ ಪುತ್ತೂರು ರೋಟರಿ ಕ್ಲಬ್‌ಗೆ ಕಳೆದ ವರ್ಷ ತಾಲೂಕು ರಾಜ್ಯೋತ್ಸವ ಪ್ರಶಸ್ತಿಯು ಸಂದಿತ್ತು.

ರೋಟರಿ ಜಿಲ್ಲೆ 3181 (ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು) ಒಳಗೊಂಡ ಈ ಸೆಮಿನಾರ್ ಅನ್ನು ಜಿಲ್ಲಾ ಗವರ್ನರ್ ರೊ. ರಾಮಕೃಷ್ಣ ಪಿ.ಕೆ. ಉದ್ಘಾಟಿಸಲಿದ್ದಾರೆ. ದೇಶದ ವಿವಿಧ ಭಾಗಗಳಿಂದ ರೋಟರಿ ಮುಖ್ಯಸ್ಥರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, ಫೌಂಡೇಶನ್ ಕಾರ್ಯದ ಬಗ್ಗೆ ಸದಸ್ಯರಿಗೆ ಆಳವಾದ ಅರಿವು ನೀಡಲಿದ್ದಾರೆ.

ಈ ಎರಡು ದಿನದ ಸೆಮಿನಾರ್‌ಗೆ ಸುಮಾರು 600ಕ್ಕೂ ಅಧಿಕ ರೋಟರಿ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ

Leave a Reply

Your email address will not be published. Required fields are marked *

Join WhatsApp Group
error: Content is protected !!