ಪುತ್ತೂರು :ರೋಟರಿ ಕ್ಲಬ್ ಪುತ್ತೂರು, ಪುತ್ತೂರು ರೋಟರಿ ಮ್ಯಾಮೋಗ್ರಾಫಿ ಸೆಂಟರ್, ಜ್ಞಾನ ವಿಕಾಸ ಕೇಂದ್ರ ಮತ್ತು ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯ ಸಂಯುಕ್ತ ಸಹಯೋಗದಲ್ಲಿ ನಿರಂತರ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವು ಡಿಸೆಂಬರ್ 1ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬೊಳ್ವಾರು ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ನಡೆಯಲಿದೆ.

ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ/ಸಕ್ಕರೆ ಕಾಯಿಲೆ, ಥೈರಾಯಿಡ್, ಮಕ್ಕಳ ಆರೋಗ್ಯ ತಪಾಸಣೆ, ಹೃದಯ ತಪಾಸಣೆಗೆ ಇಸಿಜಿ, ಸೇವ್ ಹಾರ್ಟ್ ಪರೀಕ್ಷೆ, ಸ್ತನ ಕಾಯಿಲೆ ತಪಾಸಣೆ ಹಾಗೂ ನರ ಸೂಕ್ಷ್ಮತೆ ಪರೀಕ್ಷೆಗಳು ನಡೆಯಲಿವೆ. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 94831 27777, 94481 26326, 94837 87876 ಸಂಖ್ಯೆಗಳಿಗೂ ಸಂಪರ್ಕಿಸಬಹುದು ಎಂದು ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ. ಶ್ರೀಪ್ರಕಾಶ್ ಬಿ., ಕಾರ್ಯದರ್ಶಿ ಪ್ರೊ. ಸುಬ್ಬಪ್ಪ ಕೈಕಂಬ, ಸಮುದಾಯ ಸೇವಾ ವಿಭಾಗದ ನಿರ್ದೇಶಕ ಗುರುರಾಜ್ ಕೊಳತ್ತಾಯ, ಸ್ತನ–ಥೈರಾಯಿಡ್ ಕ್ಯಾನ್ಸರ್ ತಜ್ಞೆ ಡಾ. ಸ್ಮಿತಾ ಎಸ್. ರಾವ್ ಹಾಗೂ ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಯು. ಶ್ರೀಪತಿ ರಾವ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!