
ಬಂಟ್ವಾಳ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕೂಡ್ತಮುಗೇರು ಪ್ರದೇಶದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಗುರುವಾರ ಬೆಳಿಗ್ಗೆ ದಾಖಲಾಗಿದೆ.
ರತ್ನಕುಮಾರ್, ಪೊಲೀಸ್ ಉಪ ನಿರೀಕ್ಷಕರು (ತನಿಖೆ-01) ಹಾಗೂ ಠಾಣಾ ಸಿಬ್ಬಂದಿಗಳು ನಡೆಸುತ್ತಿದ್ದ ವಾಹನ ತಪಾಸಣೆ ವೇಳೆ ಬೋಳ್ಪದೆ ದಿಕ್ಕಿನಿಂದ ಬರುತ್ತಿದ್ದ KA-12-A-9095 ನೋಂದಣಿಯ ಲಾರಿಯನ್ನು ತಡೆದು ಪರಿಶೀಲಿಸಿದಾಗ, ವಾಹನದಲ್ಲಿ ಹೆಚ್ಚಿನ ಪ್ರಮಾಣದ ಕೆಂಪುಕಲ್ಲು ತುಂಬಿಸಿಕೊಂಡಿರುವುದು ಪತ್ತೆಯಾಗಿದೆ.
ವಾಹನ ಚಾಲಕ ಎನ್.ಸಿ. ಶರೀಪ್ (42) ಯಾವುದೇ ಪರವಾನಿಗೆ ಅಥವಾ ಮಾನ್ಯ ದಾಖಲೆಗಳಿಲ್ಲದೆ ಕಲ್ಲುಗಳನ್ನು ಅಕ್ರಮವಾಗಿ ಕಳ್ಳತನ ಮಾಡಿ ಸಾಗಿಸುತ್ತಿದ್ದಾನೆಂದು ಪತ್ತೆಯಾಗಿದೆ.
ಪೊಲೀಸರು ಲಾರಿಯನ್ನು ಲೋಡ್ ಸಮೇತ ಹಾಗೂ ಚಾಲಕನನ್ನು ವಶಕ್ಕೆ ಪಡೆದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 179/2025ರಡಿ BNS 2023ರ ಕಲಂ 303(2) ಹಾಗೂ MMDR ಕಾಯ್ದೆಯ U/s 4(1), 21ರಂತೆ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಲಾಗಿದೆ.






