ಅಜ್ಜಿಕಟ್ಟೆ: ಮಸ್ಜಿದುಲ್ ಬದ್ರಿಯಾ ಜುಮಾ ಮಸೀದಿ ಅಜ್ಜಿಕಟ್ಟೆ ಇದರ ಅಧೀನದಲ್ಲಿರುವ ರಿಫಾಯಿಯ್ಯಾ ದಫ್ ಕಮಿಟಿ ಅಜ್ಜಿಕಟ್ಟೆ ಇದರ ವತಿಯಿಂದ ಹಾಗೂ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಡಿ.21ರಂದು ಆಯೋಜಿಸಲಾಗಿದೆ.

ಬೆಳಗ್ಗೆ 9.00ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನಡೆಯುವ ಶಿಬಿರವು ಮಸ್ಜಿದ್ ವಠಾರ, ಅಜ್ಜಿಕಟ್ಟೆ ಯಲ್ಲಿ ನಡೆಯಲಿದೆ.

ಶಿಬಿರದಲ್ಲಿ ಕೊಲೆಸ್ಟ್ರಾಲ್ ಟೆಸ್ಟ್, ಥೈರಾಯಿಡ್ ಟೆಸ್ಟ್, ರಕ್ತದೊತ್ತಡ (ಬಿ.ಪಿ), ಶುಗರ್ ಸೇರಿದಂತೆ ವಿವಿಧ ಲ್ಯಾಬ್ ಪರೀಕ್ಷೆಗಳು ನಡೆಯಲಿದ್ದು, ಸಾಮಾನ್ಯ ವೈದ್ಯರು, ಹೃದ್ರೋಗ ತಜ್ಞರು, ಎಲುಬು ಮತ್ತು ಕೀಲು ತಜ್ಞರು ಹಾಗೂ ಫಿಸಿಯೋಥೆರಪಿ ಸೇವೆ ಲಭ್ಯವಿರಲಿದೆ. ತಜ್ಞ ವೈದ್ಯರಿಂದ ಉಚಿತ ಸಲಹೆ ನೀಡಲಾಗುತ್ತದೆ.

ಸರ್ವಸಾಮಾನ್ಯರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ರಿಫಾಯಿಯ್ಯಾ ದಫ್ ಕಮಿಟಿ ಅಜ್ಜಿಕಟ್ಟೆ ಯ ಸರ್ವಸದಸ್ಯರು ಮನವಿ ಮಾಡಿದ್ದಾರೆ. .

Leave a Reply

Your email address will not be published. Required fields are marked *

Join WhatsApp Group
error: Content is protected !!