
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಪುತ್ತೂರು ತಾಲೂಕು ಸೀರತ್ ಕಮಿಟಿಗೆ ಇಂದು (ಜ.9) ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ತುಂಬೆ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ತುಂಬೆ ಮೊಯಿದೀನ್ ಭೇಟಿ ನೀಡಲಿದ್ದಾರೆ.
ಸೀರತ್ ಕಮಿಟಿಯ ಸ್ಥಾಪಕರಾಗಿದ್ದ ಮರ್ಹುಮ್ ಬಿ.ಎ. ಅಹ್ಮದ್ ಹಾಜಿ ಮುಹ್‌ಯುದ್ದೀನ್ ಅವರ ಸುಪುತ್ರರಾದ ಡಾ. ತುಂಬೆ ಮೊಯಿದೀನ್ ಅವರು ವಿದೇಶದಲ್ಲಿ ಪ್ರಸಿದ್ಧ ಮೆಡಿಕಲ್ ಕಾಲೇಜು, ಆಸ್ಪತ್ರೆಗಳು ಸೇರಿದಂತೆ ಹಲವು ಉದ್ಯಮಗಳನ್ನು ಸ್ಥಾಪಿಸಿ ಗುರುತಿಸಿಕೊಂಡಿದ್ದಾರೆ.
ಈ ಭೇಟಿ ಪುತ್ತೂರು ಮುಖ್ಯ ರಸ್ತೆಯ ಜುಮ್ಮಾ ಮಸ್ಜಿದ್ ಕಟ್ಟಡದಲ್ಲಿರುವ ಪುತ್ತೂರು ತಾಲೂಕು ಸೀರತ್ ಕಮಿಟಿ ಕಚೇರಿಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸೀರತ್ ಕಮಿಟಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಜಮಾಆತ್ ಹಾಗೂ ವಿವಿಧ ಸಂಘ–ಸಂಸ್ಥೆಗಳ ಪ್ರಮುಖರು ಭಾಗವಹಿಸಬೇಕಾಗಿ ಕಮಿಟಿ ಅಧ್ಯಕ್ಷರು ಹಾಗೂ ಸದಸ್ಯರು ಮನವಿ ಮಾಡಿದ್ದಾರೆ






