
ಪುತ್ತೂರು: ರಿಕ್ಷಾದಲ್ಲಿ ಪ್ರಯಾಣಿಸಿದ್ದ ಮಹಿಳೆಯೊಬ್ಬರು ಮರೆತು ಹೋಗಿದ್ದ ಮುಖ್ಯ ದಾಖಲೆಗಳ ಬ್ಯಾಗ್‌ನ್ನು ಸುರಕ್ಷಿತವಾಗಿ ವಾರಸುದಾರರಿಗೆ ಮರಳಿಸುವ ಮೂಲಕ SDTU ರಿಕ್ಷಾ ಯೂನಿಯನ್ ಅಧ್ಯಕ್ಷ ಆಸಿಫ್ ಮುಕ್ವೆ ಅವರು ಪ್ರಾಮಾಣಿಕತೆಗೆ ಮಾದರಿಯಾಗಿದ್ದಾರೆ.
ಪುತ್ತೂರಿನಿಂದ ಪುರುಷರಕಟ್ಟೆಗೆ ಮಹಿಳೆಯೊಬ್ಬರು ಆಸಿಫ್ ಮುಕ್ವೆ ಅವರ ರಿಕ್ಷಾದಲ್ಲಿ ಪ್ರಯಾಣಿಸಿದ್ದರು. ಮನೆ ತಲುಪಿದ ಬಳಿಕ ಇಳಿಯುವ ವೇಳೆ ತಮ್ಮ ಪ್ರಮುಖ ದಾಖಲೆಗಳಿದ್ದ ಬ್ಯಾಗ್‌ನ್ನು ರಿಕ್ಷಾದಲ್ಲೇ ಬಿಟ್ಟು ಹೋಗಿದ್ದಾರೆ. ನಂತರ ರಿಕ್ಷಾದಲ್ಲಿ ಬ್ಯಾಗ್ ಇರುವುದನ್ನು ಗಮನಿಸಿದ ಆಸಿಫ್ ಮುಕ್ವೆ ಅವರು, ದಾಖಲೆಗಳ ಆಧಾರದಲ್ಲಿ ಮಹಿಳೆಯ ವಿಳಾಸವನ್ನು ಪತ್ತೆ ಹಚ್ಚಿ, ಪುರುಷರಕಟ್ಟೆಯಲ್ಲಿರುವ ಅವರ ಮನೆಗೆ ತೆರಳಿ ಬ್ಯಾಗ್‌ನ್ನು ಹಸ್ತಾಂತರಿಸಿದ್ದಾರೆ.
SDTU ಸಂಘಟನೆಯ ಅಧ್ಯಕ್ಷ ಸ್ಥಾನದಲ್ಲಿರುವ ಆಸಿಫ್ ಮುಕ್ವೆ ಅವರ ಈ ಜವಾಬ್ದಾರಿಯುತ ನಡೆ ರಿಕ್ಷಾ ಚಾಲಕರ ವೃತ್ತಿಗೆ ಗೌರವ ಹೆಚ್ಚಿಸಿದೆ. ಅವರ ಪ್ರಾಮಾಣಿಕತೆಯನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.






