ಪುತ್ತೂರು: ಮುಂಡೂರು ಗ್ರಾಮದಲ್ಲಿ ನೂತನವಾಗಿ ಆರಂಭವಾಗಲಿರುವ ಆರ್ ಟಿ ಒ ಟ್ರ್ಯಾಕ್ ಮತ್ತು ಬಜತ್ತೂರಿನಲ್ಲಿ ನಿರ್ಮಾಣವಾಗಲಿರುವ ಅಂಬೇಡ್ಕರ್ ವಸತಿ ಶಾಲೆಗೆ ನಿಗಧಿ ಮಾಡಲಾದ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಮರಗಳು ಇದ್ದು ಅದನ್ನು ಕಠಾವಿಗೆ ಆದೇಶ ಮಾಡುವಂತೆ ಅರಣ್ಯ ಸಚಿವ ಈಶ್ವರಖಂಡ್ರೆ ಅವರಿಗೆ ಶಾಶಕ ಅಶೋಕ್ ರೈ ಮನವಿ ಮಾಡಿದ್ದಾರೆ.

ಗುರುವಾರ ಸಚಿವರನ್ನು ವಿಧಾನಸೌಧ ಕಚೇರಿಯಲ್ಲಿ ಭೇಟಿಯಾದ ಶಾಸಕರು ಬಜತ್ತೂರಿನಲ್ಲಿ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣವಾಗಲಿದೆ. ವಸತಿ ಶಾಲೆಗೆ ನಿಗಧಿಮಾಡಲಾದ ಸರಕಾರಿ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆಗೊಳಪಟ್ಟ ಮರಗಳಿದ್ದು ಅವುಗಳನ್ನು ಕಠಾವು ಮಾಡಬೇಕಾದ ಅವಶ್ಯಕತೆ ಇದೆ. ಕಟ್ಟಡ ನಿರ್ಮಾಣ ಮಾಡುವಷ್ಟು ಜಾಗದಲ್ಲಿ ಮಾತ್ರ ಮರಗಳನ್ನು ಕಠಾವು ಮಾಡುವಂತೆ ಸಚಿವಾಲಯದಿಂದ ಆದೇಶ ಅಗತ್ಯವಿದ್ದು ಇಲಾಖೆಗೆ ಸೂಚನೆ ನೀಡುವಂತೆ ಶಾಸಕರು ಮನವಿ ಮಾಡಿದ್ದಾರೆ.

ಮುಂಡೂರಿನಲ್ಲಿ ಆರ್ ಟಿ ಒ ಟ್ರ್ಯಾಕ್ ನಿರ್ಮಾಣಕ್ಕೆ ನಿಗಧಿ ಮಾಡಲಾದ ಜಾಗದಲ್ಲಿಯೂ ಸಾಮಾಜಿಕ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ ಮರಗಳಿದ್ದು ಅವುಗಳನ್ನು ಕಠಾವು ಮಾಡಲು ಆದೇಶ ಮಾಡುವಂತೆ ಸಚಿವರಿಗೆ ಮನವಿ ಮಾಡಿದ್ದಾರೆ. ಶಾಸಕರ ಮನವಿಗೆ ಸಚಿವರು ಪೂರಕ ಸ್ಪಂದನೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!