ಪುತ್ತೂರು :ವೈದ್ಯಕೀಯ ತಜ್ಞ ಡಾ. ನಝೀರ್ ಅಹಮ್ಮದ್ ಅವರ ಆಶ್ರಯದಲ್ಲಿ, ರೋಟರಿ ಕ್ಲಬ್ ಪುತ್ತೂರು ಮತ್ತು ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಸಹಯೋಗದಲ್ಲಿ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಫೆಬ್ರವರಿ 11, 2026 ಬುಧವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಕಲ್ಲಾರೆ ದರ್ಬೆಯ ಕೃಷ್ಣ ಆರ್ಕೆಡ್‌ನಲ್ಲಿರುವ ಡಾ. ನಝೀರ್ ಅಹಮ್ಮದ್ ಅವರ ಕ್ಲಿನಿಕ್‌ನಲ್ಲಿ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಥೈರಾಯಿಡ್ ಗ್ರಂಥಿ ತಪಾಸಣೆ, HBA1C ಪರೀಕ್ಷೆ, ನ್ಯೂರೋಪಥಿ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಗುತ್ತದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 94814 51929 ಅನ್ನು ಸಂಪರ್ಕಿಸಲು ಸಂಘಟಕರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!