ಮಂಗಳೂರು, ಫೆ. 26: ದ ಟೈಮ್ಸ್ ಆಫ್ ಇಂಡಿಯಾ ಆಯೋಜಿಸಿದ್ದ ‘ಟೈಮ್ಸ್ ಬಿಸಿನೆಸ್ ಅವಾರ್ಡ್ಸ್ & ಕಾಂಕ್ಲೇವ್–2026’ ಕಾರ್ಯಕ್ರಮವು ಮಂಗಳೂರಿನ ಅವತಾರ್ ಹೋಟೆಲ್‌ನಲ್ಲಿ ನಡೆಯಿತು.
ಮಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ಭಾಗಗಳ ವಿವಿಧ ಕ್ಷೇತ್ರಗಳ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈದ ಸಂಸ್ಥೆಗಳು ಮತ್ತು ಉದ್ಯಮಿಗಳನ್ನು ಆಯ್ಕೆ ಮಾಡಿ ಅವರಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರ ಪ್ರದಾನಿಸಲಾಯಿತು.
ರಾಜ್ಯಾದ್ಯಂತ ಪುಸ್ತಕ ಮಾರಾಟ ಮಳಿಗೆಗಳ ಮೂಲಕ ಹೆಸರುವಾಸಿಯಾಗಿರುವ ಎಸ್‌ಎಲ್‌ವಿ ಬುಕ್ ಹೌಸ್‌ಗೆ ‘ವಿಶ್ವಾಸಾರ್ಹ ಶಾಲಾ ಸಾಮಗ್ರಿಗಳ ಬ್ರ್ಯಾಂಡ್’ ವಿಭಾಗದಲ್ಲಿ ಟೈಮ್ಸ್ ಬಿಸಿನೆಸ್ ಅವಾರ್ಡ್ ನೀಡಿ ಗೌರವಿಸಲಾಯಿತು. ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿಗಳನ್ನು ಪ್ರದಾನಿಸಿದರು.
ಸಂಸ್ಥೆಯ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ದಿವಾಕರ್ ದಾಸ್ ನೇರ್ಲಾಜೆ ಮತ್ತು ಪ್ರಧಾನ ವ್ಯವಸ್ಥಾಪಕ ರಾಜಾ ಅಂಚನ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಚಂದ್ರಕಾಂತ್ (ಬೆಂಗಳೂರು), ರಾಮ್ ದಾಸ್ ಶೆಟ್ಟಿ (ವಿಟ್ಲ), ಯೋಗೀಶ್ ನೇರ್ಲಾಜೆ, ಅಮಿತ್ (ಮೈಸೂರು) ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ದಿವಾಕರ್ ದಾಸ್, “ಗ್ರಾಹಕರಿಗೆ ನೀಡಿದ ಉತ್ತಮ ಸೇವೆಯ ಫಲವಾಗಿ ಈ ಗೌರವ ಲಭಿಸಿದೆ. ಈ ಪ್ರಶಸ್ತಿಯನ್ನು ನಮ್ಮ ಗ್ರಾಹಕರಿಗೆ ಹಾಗೂ ವಿಶೇಷ ಸೇವೆ ನೀಡಿದ ಸಂಸ್ಥೆಯ ಎಲ್ಲಾ ಸಿಬ್ಬಂದಿಗೆ ಅರ್ಪಿಸುತ್ತೇನೆ” ಎಂದು ಹೇಳಿದರು.
ಎಸ್‌ಎಲ್‌ವಿ ಬುಕ್ ಹೌಸ್‌ ಬೆಂಗಳೂರು, ಮೈಸೂರು, ಚಾಮರಾಜನಗರ, ಪುತ್ತೂರು, ಮೂಡಬಿದ್ರೆ ಹಾಗೂ ಮಂಗಳೂರಿನ ಬಿಜೈ, ಮೇರಿಹಿಲ್, ಮಾರ್ನೆಮಿಕಟ್ಟೆ, ಕೊಡಿಯಾಲ್ ಬೈಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಕೊಡಗಿನ ಕುಶಾಲನಗರದಲ್ಲಿ ಶೀಘ್ರದಲ್ಲೇ ಹೊಸ ಶಾಖೆ ಆರಂಭಿಸಲು ಸಿದ್ಧತೆ ನಡೆಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!